ಫೆ.8ರಂದು ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 53ನೇ ವರ್ಷದ ಏಕಾಹ ಭಜನೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 53ನೇ ವರ್ಷದ ಏಕಾಹ ಭಜನೆಯು ಫೆ.8ರಂದು ಸೂರ್ಯೋದಯದಿಂದ ಫೆ‌.9ರಂದು ಸೂರ್ಯೋದಯದ ತನಕ ಜರುಗಲಿದೆ.

ಬೆಳಿಗ್ಗೆ ದೀಪಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಪೂಜೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಫೆ.9ರಂದು ಬೆಳಿಗ್ಗೆ ಮಂಗಳಾಚರಣೆ, ದೀಪಸ್ತಂಭನ, ಪ್ರಸಾದ ವಿತರಣೆ ಜರುಗಲಿದೆ.
ಏಕಾಹ ಭಜನೆ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯಲಿದೆ.