ಕಳಂಜ ಸಹಕಾರಿ ಸಂಘದ ಚುನಾವಣೆ

0

ಮತದಾನ ಆರಂಭ

ಇತ್ತಂಡಗಳಿಂದ ನ್ಯಾಯಾಲಯದ ಮೂಲಕ ಮತದಾನದ ಅವಕಾಶ ಪಡೆದ ಸದಸ್ಯರು

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ಇಂದು ಆರಂಭಗೊಂಡಿದೆ. ಕಳಂಜ ವಿಶ್ವನಾಥ ರೈ ನೇತೃತ್ವದ ಸಮನ್ವಯ ರಂಗ 2೦೦ ಮಂದಿ ಸದಸ್ಯರಿಗೆ ಮತದಾನದ ಅವಕಾಶವನ್ನು ನ್ಯಾಯಾಲಯದ ಮೂಲಕ ಬಂದಿದ್ದರೆ, ಬಿಜೆಪಿ ನೇತೃತ್ವದ ಸಹಕಾರ ಭಾರತಿ ತಂಡ 266 ಸದಸ್ಯರಿಗೆ ಮತದಾನದ ಅವಕಾಶವನ್ನು ತಂದಿದೆ.

ಇಂದು ಬೆಳಿಗ್ಗೆ ನ್ಯಾಯಾಲಯದ ಈ ಆದೇಶ ಬಂದುದರಿಂದ ಸಹಕಾರಿ ಸಂಘವು ಈ 466 ಮಂದಿಗೆ ಪ್ರತ್ಯೇಕ ಮತದಾನಕ್ಕೆ ವ್ಯವಸ್ಥೆಯನ್ನು ಮಾಡುತ್ತಿದೆ. ಆದುದರಿಂದ ಈ ಮತದಾರರಲ್ಲಿ ಕೆಲವು ಸಹಕಾರಿ ಸಂಘಕ್ಕೆ ಬಂದಿದ್ದರೂ ಅವರು ಕಾಯುವಂತಾಗಿದೆ.


ಕ್ರಮಬದ್ಧವಾಗಿದ್ದು, ಮತದಾನದ ಅವಕಾಶ ಇದ್ದ 770 ಸದಸ್ಯರು ಬೆಳಿಗ್ಗಿನಿಂದಲೇ ಮತದಾನ ಮಾಡಿ ಹೋಗುತ್ತಿದ್ದಾರೆ.