ಚೆಂಬು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ನಿಧಿ ಹಸ್ತಾಂತರ

0

ಚೆಂಬು ಗ್ರಾಮದ ಉಂಬಳೆ ಭಾಸ್ಕರ ಮತ್ತು ಜಯಂತಿ ದಂಪತಿಗಳ ಮನೆಯು ಇತ್ತೀಚೆಗೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು,ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (B.C) ಟ್ರಸ್ಟ್ ವತಿಯಿಂದ ಪರಿಹಾರ ಧನವಾಗಿ ದೊರಕಿದ ರೂ 25,000-00(ಇಪ್ಪತೈದು ಸಾವಿರ ) ರೂಪಾಯಿಗಳ ಹಸ್ತಾಂತರವನ್ನು ಯೋಜನಾಧಿಕಾರಿಗಳಾದ ಪುರುಷೋತ್ತಮರವರು ನಿರ್ವಹಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸಂತೋಷ್,ಸೇವಾ ಪ್ರತಿನಿಧಿ ಚಿದಾನಂದ, ಎಂ.ಚೆಂಬು ಒಕ್ಕೂಟದ ನಿಕಟ ಪೂರ್ವ ಕಾರ್ಯದರ್ಶಿ ವಿಜಯಕುಮಾರ್,ಎಂ.ಟಿ.ರಾಮಮೂರ್ತಿ ರವರು ಉಪಸ್ಥಿತರಿದ್ದರು.