














ಇತ್ತೀಚಗೆ ನಿಧನರಾದ ಯಕ್ಷಗಾನ ಹವ್ಯಾಸಿ ಕಲಾವಿದ, ಬಣ್ಣಗಾರಿಕೆ ನಿಷ್ಣಾತ, ರಂಗಕರ್ಮಿ ರಾಮತ್ತೀಕಾರಿ ರಾಮಣ್ಣ ಗೌಡ ಹಾಗೂ ಯಕ್ಷಗಾನ ತಾಳಮದ್ದಲೆ ಖ್ಯಾತ ಅರ್ಥದಾರಿ ಕೆ.ವಿ.ಗಣಪಯ್ಯರವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುವ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.7 ರಂದು ಕಲ್ಮಡ್ಕದ ಸಂಗಮ ಕಲಾ ಸಂಘದ ಆಶ್ರಯದಲ್ಲಿ ಜರುಗಿತು. ಸಭೆಗೆ ಸಂಘದ ಸದಸ್ಯರು, ಆಪ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ ಮೃತರ ಗುಣಗಾನ ಮಾಡಿ ಪುಷ್ಪಾರ್ಚನೆಯೊಂದಿಗೆ ಸದ್ಗತಿಯನ್ನು ಕೋರಲಾಯಿತು.










