ಕೇರ್ಪಡ : ಕೂಡುಕಟ್ಟು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಸೋಣ ನಡಾವಳಿ

0

ಕೇರ್ಪಡ ಕೂಡುಕಟ್ಟು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಫೆ.8ರಂದು ಸೋಣ ನಡಾವಳಿ ನಡೆಯಿತು. ಈ ಪ್ರಯುಕ್ತ ಬಿರ್ಮೆರ್, ಶಿರಾಡಿ ರಾಜನ್ ದೈವ, ಗುಳಿಗದೈವ, ಗಿಳಿರಾಮ, ಕಲ್ಕುಡ ಕಲ್ಲುರ್ಟಿ ಉಪ ದೈವಗಳ ನೆಮೋತ್ಸವ ನಡೆಯಿತು.

ವಾಣಿ ಕಾಂಪ್ಲೆಕ್ಸ್ ಮಾಲಕ ದಿ. ಕರುಣಾಕರ ಗೌಡರ ನೆನಪಿಗಾಗಿ ಅವರ ಪತ್ನಿ ಶ್ರೀಮತಿ ವೀಣಾ ಕರುಣಾಕರ ಮತ್ತು ಮಕ್ಕಳು 125 ಊಟದ ಸ್ಟೀಲ್ ಬಟ್ಟಲು ಕೊಡುಗೆಯಾಗಿ ನೀಡಿದರು.
ಕೂಡುಕಟ್ಟು ಸದಸ್ಯರು ಸೇರಿ 52 ಪೈಬರ್ ಚಯರ್ ನೀಡಿದರು. ಸಮಿತಿ ಅಧ್ಯಕ್ಷ ಎಂಜಿರು ಪದ್ಮನಾಭ ರೈ ಮನೆಯವರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದರು.
ಸದಸ್ಯರು, ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.