














ಎಕ್ಸೆಟೆಸಿ ಡ್ಯಾನ್ಸ್ ಕ್ರೂವ್ ಆಶ್ರಯದಲ್ಲಿ ಡ್ಯಾನ್ಸ್ ತಂಡದ ತರಬೇತು ವಿದ್ಯಾರ್ಥಿಗಳ ಮತ್ತು ಪೋಷಕರ ಸಮ್ಮಿಲನ “ಎಕ್ಸೆಟೆಸಿ ಪರಿವಾರ-೨೦೨೫” ಕಾರ್ಯಕ್ರಮವು ಸುಳ್ಯ ಅಂಬೆಟಡ್ಕದ ಕನ್ನಡ ಭವನದಲ್ಲಿ ದಿನಾಂಕ ೦೯ ಫೆಬ್ರವರಿ ೨೦೨೫ ಆದಿತ್ಯವಾರದಂದು ನಡೆಯಿತು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಉದ್ಘಾಟಿಸಿ ಶುಭಹಾರೈಸಿದರು, ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮ ಶಿವಪ್ಪ ಸುತ್ತುಕೋಟೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಮುರಳಿ ನಳಿಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಭಾಗವಹಿಸಿದ ಎಲ್ಲರಿಗೂ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಎಕ್ಸೆಟೆಸಿ ನೃತ್ಯ ತಂಡದ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ಶೆಟ್ಟಿ ಬೂಡು ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿ ಕು| ತನಿಷಾ ಸ್ವಾಗತಿಸಿ ಕು| ಅರ್ಚನಾ ಸುಬ್ಬಯ್ಯ ವಂದಿಸಿದರು.










