ಪಂಜ: ಅಳ್ಪೆ ಕೋಡಿಕಾಡು ಕಾಲುದಾರಿ ಕಾಂಕ್ರೀಟೀಕರಣ- ಉದ್ಘಾಟನೆ

0

ಪಂಜ ಗ್ರಾಮ ಪಂಚಾಯತ್ ವತಿಯಿಂದ ಅಳ್ಪೆ ಕೋಡಿಕಾಡು ಕಾಲುದಾರಿ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವನ್ನು ದಾಸಪ್ಪ ಗೌಡ ಮೇಲ್ಮನೆ ದೀಪ ಬೆಳಗಿಸುವುದರೊಂದಿಗೆ ಫೆ. 9 ರಂದು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ, ಶ್ರೀಮತಿ ದಿವ್ಯ ಪುಂಡಿಮನೆ, ಐವತೊಕ್ಲು 1ನೇ ವಾರ್ಡ್ ಬಾ ಜ ಪ ಅಧ್ಯಕ್ಷ ದಯಾನಂದ ಮೇಲ್ಮನೆ, ಸದಸ್ಯರಾದ ನಾರಾಯಣ ಶಿರಾಜೆ, ಲೋಕೇಶ್ ಕೋಡಿ,ದೇವಿಪ್ರಸಾದ್ ಅಳ್ಪೆ ಕಡಪಳ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಪುಂಡಿಮನೆ, ರಸ್ತೆಯ ಫಲಾನುಭವಿಗಳು, ಪ್ರಮುಖರು ಉಪಸ್ಥಿತರಿದ್ದರು.

ಕರಿಕ್ಕಳ ಗಾಳಿಕೂಪು ಮಾರ್ಗದ ಮೂಲಕ ಚಿಂಗಾಣಿಗುಡ್ಡೆ ರಸ್ತೆಗೆ ಇದು ಸಂಪರ್ಕವನ್ನು ಕಲ್ಪಿಸುವುದರ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಕಾರ್ಯಕ್ರಮದಲ್ಲಿ ಗುರುಪ್ರಸಾದ್ ತೋಟ ಸ್ವಾಗತಿಸಿದರು. ದಯಾನಂದ ಮೇಲ್ಮನೆ ವಂದಿಸಿದರು.