ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವ

0

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸಿಕೊಂಡು ಅಡಿಕೆ / ತೆಂಗಿನ ಮರವನ್ನು ಏರುವ, ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬಂದಿರುವ ರಮೇಶ್ ಕುತ್ಪಾಜೆ ಯವರನ್ನು ಸ್ವಾಮಿ ಕೊರಗಜ್ಜ ದೈವಸ್ಥಾನ ಕೊರಂಬಡ್ಕದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವ ನೀಡಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೇಸಿ ಸುರೇಶ್ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಸಮಿತಿ ಅಧ್ಯಕ್ಷ ಕೇಶವ ಮಾಸ್ಟರ್ ಹೊಸಗದ್ದೆ ಅತಿಥಿಗಳ ನೆಲೆಯಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಾಲಮುರಳಿ ಕುದ್ಪ್ಪಾಜೆ, ,ಸುಳ್ಯ ಪಯಸ್ವಿನಿ ಜೇಸಿಐ ಕೋಶಾಧಿಕಾರಿ ಜೇಸಿ ಶಶ್ಮಿ ಭಟ್ ಅಜ್ಜಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಸಮಿತಿ ಸಂಚಾಲಕ ಜಗನ್ನಾಥ ಜಿ, ಕಾರ್ಯದರ್ಶಿ ಸುಂದರ, ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ರಮೇಶ್ ಇರಂತಮಜಲು ಪದಾಧಿಕಾರಿಗಳು,ಫ್ರೆಂಡ್ಸ್ ಕ್ಲಬ್(ರಿ) ಜಯನಗರ ಖಜಾಂಜಿ ಪ್ರಸನ್ನ ಕುದ್ಪ್ಪಾಜೆ,ಉಪಾಧ್ಯಕ್ಷ ನಿತಿನ್ ಕೊಯಿಂಗೋಡಿ, ಸದಸ್ಯರು, ಜಯನಗರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಕುದ್ಪ್ಪಾಜೆ,ನಗರ ಪಂಚಾಯತ್ ಮಾಜಿ ಸದಸ್ಯ ರೋಹಿತ್ ಕೊಯಿಂಗೋಡಿ, ದೈವಸ್ಥಾನ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.