ಕನಕಮಜಲು: ತೇಜಸ್ ಕುದ್ಕುಳಿ ಸಿ.ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ

0

ಕನಕಮಜಲು ಗ್ರಾಮದ ಕುದ್ಕುಳಿ, ಜಾಲ್ಸೂರು ಅನಿಶ ಕ್ಲಿನಿಕ್ ವೈದ್ಯರಾದ ಡಾ. ಹರಿಪ್ರಸಾದ್ ಹಾಗೂ ಶ್ರೀಮತಿ ಸುಷ್ಮಾ ದಂಪತಿಯ ಪುತ್ರ ತೇಜಸ್ ಕೆ.ಎಚ್. ಅವರು ಸಿ.ಎಂ.ಎ. (Cost and Management Accountant ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ತೇಜಸ್ ಕೆ.ಎಚ್. ಅವರು ಮಂಗಳೂರಿನಲ್ಲಿ ಸಿ.ಎಂ.ಎಸ್. ಪರೀಕ್ಷೆ ಬರೆದಿದ್ದರು.

ಸುಳ್ಯ ಸ್ನೇಹ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಪಿಯುಸಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿರುತ್ತಾರೆ..