ಇಂದು ರೆಂಜಾಳದಲ್ಲಿ ಪಾವಂಜೆ ಮೇಳದವರಿಂದ ಅಯೋಧ್ಯಾದೀಪ ಯಕ್ಷಗಾನ ಬಯಲಾಟ

0

ಸಂಜೆ ಶ್ರೀ ದೇವರಿಗೆ ಅಷ್ಟವಧನ ವಿಶೇಷ ಸೇವೆ

ಸಭಾ ಕಾರ್ಯಕ್ರಮ – ಹಿರಿಯ ಕಲಾವಿದರಿಗೆ ಗೌರವ ಸನ್ಮಾನ

ರೆಂಜಾಳ ಶ್ರೀಮತಿ ಪ್ರೇಮಾ ಮತ್ತು ಜಗನ್ಮೋಹನ ರೈ ಗಳಿಂದ ಆಯೋಜನೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಇವರಿಂದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಅಯೋಧ್ಯಾದೀಪ ಎಂಬ ಆಖ್ಯಾನ ವನ್ನು ರೆಂಜಾಳ ಶ್ರೀಮತಿ ಪ್ರೇಮ ಜೆ. ರೈ ಮತ್ತು ಜಗನ್ಮೋಹನ ರೈ ಕೆ. ಇವರ ಸೇವಾ ಬಯಲಾಟವಾಗಿ ಪಾವಂಜೆ ಮೇಳದವರಿಂದ ಮರ್ಕಂಜದ ರೆಂಜಾಳ ಶ್ರೀ ಶಾಸ್ತ್ರವು ಸದಾಶಿವ ಮಹಾಗಣಪತಿ ದೇವಾಲದ ವಠಾರದಲ್ಲಿ ಇಂದು(ಫೆ.12) ಸಂಜೆಯಿಂದ ನಡೆಯಲಿದೆ.

ಇದೆ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಕಲಾವಿದರಾದ ಬೊಮ್ಮರು ಐತಪ್ಪ ಗೌಡ, ರೆಂಜಾಳ ರಾಮಕೃಷ್ಣ ರಾವ್ ರವರಿಗೆ ಗೌರವ ಸನ್ಮಾನ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇದರ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆ, ಯಕ್ಷದ್ರುವ ಪಟ್ಲ ಪೌಂಡೆಷನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಯಕ್ಷದ್ರುವ ಸತೀಶ್ ಶೆಟ್ಟಿ ಪಟ್ಲ, ಜೈನ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಇಲ್ಲಿಯ ಪ್ರಾಂಶುಪಾಲರಾದ ಡಾ| ಪ್ರಭಾತ್ ಬಲ್ನಾಡು ಮುಖ್ಯ ಅಥಿತಿ ಗಳಾಗಿ ಪಾಲ್ಗೊಳ್ಳಲಿದ್ದಾರೆ.

ರೆಂಜಾಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ರೆಂಜಾಳ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣುರು, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಧ್ಯಕ್ಷ ರಾಘವ ಕಂಜಿಪಿಲಿ ಗೌರವ ಉಪಸ್ಥಿತರಿರಳಿದ್ದಾರೆ.

ಸಂಜೆ 5 ಗಂಟೆಯಿಂದ ಪಾವಂಜೆ ಶ್ರೀ ದೇವರಿಗೆ ಸಂಕ್ರಮಣ ಪೂಜೆ, ಅಷ್ಟವಧನ ಸೇವೆ ನಡೆಯಲಿದೆ. ಬಳಿಕ ಚೌಕಿ ಪೂಜೆ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.