














ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಫೆಬ್ರವರಿ ತಿಂಗಳ ಮಾಸಿಕ ಸಭೆ ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಫೆ. 11ರಂದು ಜೆ.ಡಿ. ಆಡಿಟೋರಿಯಂನಲ್ಲಿ ನಡೆಯಿತು.
ಚಿತ್ರಕಲಾ ಕಲಾವಿದ ಪದ್ಮನಾಭ ಕಲಾಸುಮ ಮತ್ತು ಶ್ರೀಮತಿ ಅನಿತಾ ದಂಪತಿ, ಪ್ರಮೋದ್ ಕುಮಾರ್ ರೈ ಮತ್ತು ಶ್ರೀಮತಿ ಸಂಧ್ಯಾ ರೈ ದಂಪತಿ ಹಾಗೂ ಜಿತೇಶ್ ಪೆರುವಾಜೆಯವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಕ್ಲಬ್‌ನ ಅಧ್ಯಕ್ಷೆ ಲ. ಉಷಾ ಬಿ ಭಟ್, ಕಾರ್ಯದರ್ಶಿ ಲ. ಚೇತನ್ ಡಿ. ಶೆಟ್ಟಿ, ಕೋಶಾಧಿಕಾರಿ ಲ. ಈಶ್ವರ ವಾರಣಾಶಿ ಪ್ರಾಂತ್ಯಾಧ್ಯಕ್ಷ ಅಧ್ಯಕ್ಷ ಲ. ಗಂಗಾಧರ ರೈ ಎಸ್, ಕ್ಲಬ್‌ನ ಐಪಿಪಿ ವಿಠಲ್ ಶೆಟ್ಟಿ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ. ಸುನಿತಾ ಮನೋಹರ್ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಲ. ವಿಠಲ್ ಶೆಟ್ಟಿ ಧ್ವಜ ವಂದನೆ ಹೇಳಿದರು. ಲ. ಭವಾನಿ ವಿ. ಶೆಟ್ಟಿ ಪ್ರಾರ್ಥನೆ ಮಾಡಿದರು. ಲ. ಉಷಾ ಬಿ ಭಟ್ ಸ್ವಾಗತಿಸಿ, ಲ. ಈಶ್ವರ ವಾರಣಾಶಿ ವಂದಿಸಿದರು. ಕ್ಲಬ್‌ನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.










