ಹರಿಹರ ಪಲ್ಲತ್ತಡ್ಕ:ಶ್ರೀ ಗುಳಿಗರಾಜ ದೈವಸ್ಥಾನ ಎಲ್ಲಪಡ್ಕ ವಾರ್ಷಿಕ ನೇಮೋತ್ಸವ

0

ಶ್ರೀ ಗುಳಿಗರಾಜ ದೈವಸ್ಥಾನ ಎಲ್ಲಪಡ್ಕ ಹರಿಹರ ಪಲ್ಲತ್ತಡ್ಕ ಇದರ ವಾರ್ಷಿಕ ನೇಮೋತ್ಸವವು ಪೆ. 11ರಂದು ನಡೆಯಿತು.
ಬೆಳಿಗ್ಗೆ ಗಣಹೋಮ ನಡೆದು ನಂತರ ಶಿವಪೂಜೆ, ಬ್ರಹ್ಮರಾಕ್ಷಸ ಪೂಜೆ ಹಾಗು ಕಲಶ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.

ಸಾಯಂಕಾಲ ದೀಪಾರಾದನೆ, ದುರ್ಗಪೂಜೆ, ಮಹಾತಂಬಿಲ, ಅನ್ನ ಸಂತರ್ಪಣೆ ನೆರವೇರಿತು. ರಾತ್ರಿ ಶ್ರೀ ಗುಳಿಗರಾಜ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ಸಂಪ್ರೋಕ್ಷಣೆ ನಡೆಯಿತು.
ರಾತ್ರಿ ವಿಘೇಶ್ ಉಬ್ರಾಳ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ “ಅಮರೇಂದ್ರ ಪದ ವಿಜಯ” ಯಕ್ಷಗಾನ ಬಯಲಾಟ ನಡೆಯಿತು.