ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ನೆಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ 2ನೇ ದಿನವಾದ ಫೆ. 13 ರಂದು ರಾತ್ರಿ ಬಲಿ ಹೊರಟು ಉತ್ಸವ ಮತ್ತು ತರವಾಡು, ಮಾಲಿಂಗಿರಿ ಪಿಲಿಕುಂಜ ಸ್ಥಾನದಿಂದ ಮಾಲಿಂಗರಾಯ ದೈವದ ಬಂಡಾರ ಬಂದು ಓಲೆ ಸವಾರಿ ನಡೆದು, ಹೊಸಮಜಲುನಲ್ಲಿ ಕಟ್ಟೆ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.

ರಾತ್ರಿ ನೆಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮ ನಡೆಯಿತು.
ನಾಕೂರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಮತ್ತು ಜಿಲ್ಲಾ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪಾಪಣ್ಣ ವಿಜಯ ಎಂಬ ತುಳು ಕಥನ ಯಕ್ಷಗಾನ ಬಯಲಾಟ ನಡೆಯಿತು.

ವರದಿ : ಸಂಕಪ್ಪ ಸಾಲಿಯಾನ್