ಹಿಂದೂ ಧರ್ಮದ ಆಚರಣೆಗಳ ಸಂಸ್ಕ್ರತಿ ಅನಾವರಣಗೊಳ್ಳುವ ಕೇಂದ್ರವಾಗಲಿ- ಡಾ.ಕೆ.ವಿ.ಚಿದಾನಂದ
ಜೀವನದಲ್ಲಿ ಸಂಸ್ಕ್ರತಿ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಮುಂದುವರಿದಾಗ ದೇವಾಲಯಗಳು ಅಭಿವೃದ್ಧಿ ಹೊಂದಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡಲ್ಲಿ ನಮ್ಮೆಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಹೇಳಿದರು.
ಅವರು ಆಲೆಟ್ಟಿ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಧಾರ್ಮಿಕ ಸಭೆಯಲ್ಲಿ ನೂತನ ಸದಾಶಿವ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಸದಾಶಿವ ಸಭಾಭವನ ಹಾಗೂ ವೇದಿಕೆಯ ಮೂಲಕ ನಮ್ಮ ಸಂಸ್ಕಾರ ಆಚಾರ ವಿಚಾರಗಳನ್ನು ಪ್ರಸ್ತುತ ಪಡಿಸುವ ಕಲಾ ಕೇಂದ್ರವಾಗಿ ಮೂಡಿ ಬರಲಿ ಎಂದು ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ವೇದಿಕೆಯ ನಾಮ ಫಲಕ ಅನಾವರಣಗೊಳಿಸಿ ಜಗತ್ತು ತಿರುಗಿ ನೋಡುವಂತೆ ಮಾಡಿದ ಕುಂಭ ಮೇಳದಂತ ಕಾರ್ಯಕ್ರಮದ ಆಯೋಜನೆಯಿಂದ ಹಿಂದೂ ಸಮಾಜದ ಶಕ್ತಿಯ ಅನಾರವಣವಾಗಿದೆ. ದೇವಾಲಯಗಳಲ್ಲಿ ಅರ್ಚಕರು, ಮೊಕ್ತೇಸರರು ಹಾಗೂ ಭಕ್ತರು ಒಂದಾಗಿ ಸೇರಿಕೊಂಡು ಕಾರ್ಯ ನಿರ್ವಹಿಸಿದಾಗ ಮಾತ್ರ ಇಂತಹ ಶ್ರದ್ಧಾ ಕೇಂದ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
















ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಡಾ.ಎಸ್.ಅನಿಲ್ ಕುಮಾರ್ ಬೈಪಡಿತ್ತಾಯ ಪುತ್ತೂರು, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಮೊಕ್ತೇಸರ ರಾದ ಹೇಮಚಂದ್ರ ಬೈಪಡಿತ್ತಾಯ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಆಲೆಟ್ಟಿ ಸೊಸೈಟಿ ನಿರ್ದೇಶಕ ಕರುಣಾಕರ ಹಾಸ್ಪಾರೆ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಕೆ.ಅಶೋಕ ಪ್ರಭು , ಉಳ್ಳಾಕುಲು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಿಪ್ರಸಾದ್ ಕಾಪುಮಲೆ, ಹರಿಪ್ರಸಾದ್ ಗಬ್ಬಲ್ಕಜೆ, ಸತೀಶ್ ಕುಂಭಕೋಡು, ನಳಿನಿ ರೈ ಆಲೆಟ್ಟಿ, ಮಮತಾ ನಾರ್ಕೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಳ್ಳಾಕುಲು ಚಾವಡಿಗೆ ಹಂಚು ಒದಗಿಸಿಕೊಟ್ಟ ನಳಿನ್ ಕುಮಾರ್ ಕಟೀಲ್ ,ಸ್ಥಳದಾನಿಗಳಾದ ಭಾಸ್ಕರ ಗೌಡ ಐಡಿಯಲ್, ಮರ ದಾನಿಗಳಾದ ಅಶೋಕ ಪ್ರಭು, ಶಿವರಾಮ ಗೌಡ ಕಲ್ಲೆಂಬಿ, ಹರಿಪ್ರಸಾದ್ ಕಾಪುಮಲೆ, ನಿರ್ಮಲೇಶ್ವರ ನಾರ್ಕೋಡು ಹಾಗೂ ಚಪ್ಪರ ನಿರ್ಮಾಣದ ಇಂಜಿನಿಯರ್ ವಿಜಯ್ ರವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಶಾಶ್ವತ ಚಪ್ಪರ ನಿರ್ಮಾಣದ ಜವಬ್ದಾರಿ ವಹಿಸಿಕೊಂಡು ಸುಮಾರು 10 ಲಕ್ಷ ವೆಚ್ಚದಲ್ಲಿ ಕುಂಚಡ್ಕ ಕಮಲ ದುಗ್ಗಪ್ಪ ಗೌಡ ರವರ ಸವಿನೆನಪಿಗಾಗಿ ವೇದಿಕೆ ನಿರ್ಮಿಸಿಕೊಟ್ಟ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರನ್ನು ದೇವಳದ ಹಾಗೂ ಭಜನಾ ಸಂಘದ ವತಿಯಿಂದ ಮತ್ತು ಸಾರ್ವಜನಿಕರು ಹಾರಾರ್ಪಣೆ ಮಾಡಿ ಸನ್ಮಾನಿಸಿದರು.

ನಿರಂತರ ಸೇವೆ ಸಲ್ಲಿಸಿದ ಲಕ್ಷ್ಮಣ ಗೌಡ ಪರಿವಾರ, ನವೀನ್ ಕುಮಾರ್ ಆಲೆಟ್ಟಿ ಹಾಗೂ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಸುಂದರ ಆಲೆಟ್ಟಿ, ಸತೀಶ್ ಕುಂಭಕೋಡು, ಮಮತಾ ನಾರ್ಕೋಡು ಸನ್ಮಾನ ಪತ್ರ ವಾಚಿಸಿದರು.
ಭಜನಾ ಸಂಘದ ಸಂಚಾಲಕ ಧನಂಜಯ ಆಲೆಟ್ಟಿ ಪ್ರಾರ್ಥಿಸಿದರು. ಪುರುಷೋತ್ತಮ ಗೌಡ ಕೋಲ್ಚಾರು ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










