ಪಂಜ -ಬಳ್ಳಕ ವಾಹನ ಸಂಚಾರಕ್ಕೆ ಜಳಕಹೊಳೆಗೆ ಮಣ್ಣು ಹಾಸಿ ತಾತ್ಕಾಲಿಕ ರಸ್ತೆ ನಿರ್ಮಾಣ

0


⬆️ ಜಳಕದಹೊಳೆ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ನಿಷೇಧ


ಪಂಜ ಜಳಕದಹೊಳೆ ಮೂಲಕ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ
ಜಳಕದಹೊಳೆ ಸೇತುವೆ ಶಿಥಿಲ ಗೊಂಡಿದ್ದು
ಕೆಲವು ಸಮಯಗಳಿಂದ ಬಸ್ ಸೇರಿದಂತೆ ಘನ ವಾಹನ ಸಂಚಾರ ನಿಷೇಧಿಸಲಾಗಿತ್ತು. ಫೆ.13 ರಂದು ಸೇತುವೆಯ ಎರಡೂ ಬದಿಯಲ್ಲಿ ರಸ್ತೆಗೆ ಮಣ್ಣು ಹಾಕಿ ಸಂಪೂರ್ಣ ನಿಷೇಧಿಸಲಾಗಿದೆ.


ವಾಹನ ಸಂಚಾರಕ್ಕಾಗಿ ಸೇತುವೆ ಸಮೀಪ ಹೊಳೆಗೆ ಮಣ್ಣು ಹಾಸಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ. ಶಿಥಿಲ ಗೊಂಡ ಸೇತುವೆ ದುರಸ್ಥಿ ಕಾಮಗಾರಿ ನಡೆಯಲಿದ್ದು. ಬಳಿಕ ಸೇತುವೆ ಮೇಲೆ ವಾಹನ ಸಂಚಾರ ಆರಂಭ ಗೊಳ್ಳುವುದು. ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಬೇಡಿಕೆ ಸಲ್ಲಿಕೆಯಾಗಿ ಪ್ರಗತಿಯಲ್ಲಿತ್ತು. ಇದೀಗ ಸೇತುವೆ ದುರಸ್ಥಿಗೆ ಅನುದಾನ ಮಂಜೂರು
ಗೊಂಡಿರುವುದಾಗಿ ತಿಳಿದು ಬಂದಿದೆ.