ಫೆ.15: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಯೂನಿಕ್ ಕನ್ಸಲ್ಟೆಂಟ್ಸ್ ವತಿಯಿಂದ ‌ಒಂದು ದಿನದ ಕಾರ್ಯಾಗಾರ

0

ಸಜ್ಜನ ಕನ್ನಡ ಕವಿಗಳು ಕೃತಿ ಬಿಡುಗಡೆ

ಬೆಂಗಳೂರು ವೈಟ್ ಫೀಲ್ಡ್ ಪೋರ್ಚುನ್ ಸೆಲೆಕ್ಟ್ ಟ್ರಿನಿಟಿಯಲ್ಲಿ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಯೂನಿಕ್ ಕನ್ಸಟ್ಟೆಂಟ್ ಇದರ ವತಿಯಿಂದ ಫೆ.15 ರಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಪೋರ್ಚುನ್ ಸೆಲೆಕ್ಟ್ ಟ್ರಿನಿಟಿ ಯಲ್ಲಿ “ಅನುಕರಣೀಯ ಸಾಂಸ್ಥಿಕ ಸಂಸ್ಕೃತೀಯ ನಿರ್ಮಾಣ” ಎಂಬ ವಿಷಯದಲ್ಲಿ ಏಕ ದಿನ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾಸ್ಮೋಸ್ ಹೆಟ್ ಟೇಕ್ನಾಲಾಜಿಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ರಾಜಶೇಖರ ರೈ ಯವರು ನೆರವೇರಿಸಲಿದ್ದಾರೆ.

ಯೂನಿಕ್ ಕನ್ಸಲ್ಟೆಂಟ್ ನ ಮುಖ್ಯಸ್ಥ ವಿ.ಅಶ್ವಥ್ ರಾಮಯ್ಯ ತರಬೇತಿ ನೀಡಲಿದ್ದಾರೆ.
ಕಾರ್ಯಾಗಾರ ಕಾರ್ಯಕ್ರಮದ ಅಧ್ಯಕ್ಷತೆ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ವಹಿಸಲಿದ್ದಾರೆ.
ಸಜ್ಜನ ಕನ್ನಡ ನಾಡು ನುಡಿ ರಾಜ್ಯ ಸಂಚಾಲಕ ನ್ಯಾಯವಾದಿ ಮಂಜುನಾಥ. ಬಿ ಕನ್ನಡ ಕವಿ ಕೃತಿ ಪರಿಚಯ ಕೃತಿ “ಸಜ್ಜನ ಕನ್ನಡ ಕವಿಗಳು” ಲೋಕಾರ್ಪಣೆ ಮಾಡಲಿದ್ದಾರೆ.
ಸಾಹಿತಿ ಹೋ ರಾ.ಪರಮೇಶ್ವರ್ ರವರು ಅಶಯ ನುಡಿ ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಸುಬ್ಬರಾಮು ಟಿ,ದಿವ್ಯ ವಿ ಮಹೇಂದ್ರ,ಇಸ್ಮಾಯಿಲ್ ಜರಾ,ವಾಸು ಎಂ,ರವಿ ನಾರಾಯಣ, ನಟರಾಜು ಬಿ,ಕಲಂದರ್ ಕೌಶಿಕ್,ಸದಾಶಿವ, ಕೌಶರ್ ಜಬಿನ್,ರತ್ನಾಕರ್ ಶೀನಾ ಕುಂದರ್,ತಾಜುದ್ದೀನ್ ಉಬೈದ್ ಬಿ ಎಂ,ಬಿ ಬಿ ಪಾಟೀಲ್,ಶ್ರೀ ವಿದ್ಯಾ ಎಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.