ಕಲ್ಲುಮುಟ್ಲು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಂಡೆಯನ್ನು ತೆರವುಗೊಳಿಸಲು ನ. ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ

0

ಗಾಂಧಿನಗರದ ಪೆಟ್ರೋಲ್ ಬಂಕ್ ಪಕ್ಕದಿಂದ ಕಲ್ಲು ಮುಟ್ಲು ಸಂಪರ್ಕಿಸುವ ರಸ್ತೆಯಲ್ಲಿ ಬೃಹದಾಕಾರದ ಬಂಡೆಯೊಂದಿದ್ದು ವಾಹನ ಸಂಚಾರಕ್ಕೆ ನಿರಂತರವಾಗಿ ಅಡಚಣೆಯಾಗುತ್ತಿದೆ, ಇಳಿಜಾರು ಪ್ರದೇಶವಾಗಿರುವುದರಿಂದ ಹಲವು ಬಾರಿ ಈ ಪ್ರದೇಶದಲ್ಲಿ ವಾಹನ ಅಪಘಾತಗಳು ಆಗಿದೆ.

ಏಕಕಾಲಕ್ಕೆ ಎರಡು ವಾಹನಗಳು ವಿರುದ್ಧ ದಿಕ್ಕಿನಿಂದ ಬಂದರೆ ಒಂದು ವಾಹನವು ಇಳಿಜಾರಿನಲ್ಲಿ ಹಿಂದಕ್ಕೆ ಚಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ವಿಷಯದಲ್ಲಿ ಕಲ್ಲುಮುಟ್ಲು ನಿವಾಸಿ ಅಬ್ಬಾಸ್ ಎ ಎಂ ಮತ್ತು ಈ ಪ್ರದೇಶದ ಸಾರ್ವಜನಿಕರು ಪಟ್ಟಣ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದರು.