ಬಂದಡ್ಕ : ಗೌರಿಕೆರೆ ಶ್ರೀ ಅಣ್ಣಪ್ಪ ದೈವ, ಚೆಡೆಕ್ಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ

0


ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ದೈವ, ಚೆಡೆಕ್ಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ನಡೆಯಿತು.

ವಿವಿಧ ಪ್ರದೇಶಗಳಿಂದ ಆಗಮಿಸಿದ ಭಕ್ತಾದಿಗಳು ಪೂಜೆ, ಪ್ರಾರ್ಥನೆ ಮಾಡಿಸಿದರು. ದೈವಸ್ಥಾನದಲ್ಲಿ ನಡೆಸುವ ಪ್ರಧಾನ ಪ್ರಾರ್ಥನೆಗಳು, ಸಣ್ಣ ಹಾಗೂ ದೊಡ್ಡ ಸಂಕ್ರಮಣ ಪೂಜೆ , ಶತ್ರುದೋಷ ಪರಿಹಾರ ಪೂಜೆ, ಮಾಂಗಲ್ಯ ಸೌಭಾಗ್ಯ ಪ್ರಾರ್ಥನೆ, ದೀಪಾರಾಧನೆ, ಸಂತಾನ ಸೌಭಾಗ್ಯ ಪ್ರಾರ್ಥನೆ, ಅನ್ನದಾನ ಸೇವೆ, ಕಲಶ, ಪ್ರೇತ ಬಾಧೆ ದೋಷ ಪರಿಹಾರ, ಒಡಿದೋಷ ಪರಿಹಾರ, ಕೈವಿಷ ದೋಷ ಪರಿಹಾರ, ಚಾಮುಂಡೇಶ್ವರಿ ದೇವಿಗೆ ಅಲಂಕಾರ ಪೂಜೆ ಹಾಗೂ ಪ್ರಾರ್ಥನೆಯ ನಂತರ ಶ್ರೀ ಅಣ್ಣಪ್ಪನ ಭೋಜನ ಶಾಲೆಯಲ್ಲಿ ಅಣ್ಣಪ್ರಸಾದ ನಡೆಯಿತು.