ಲಯನ್ಸ್ ಕ್ಲಬ್ ಸುಳ್ಯದ ಆತಿಥ್ಯದಲ್ಲಿ ಫೆ. 22ರಂದು ಸುಳ್ಯದ ಬಂಟರ ಭವನದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ನಡೆಯಲಿದ್ದು, ಈ ಬಗ್ಗೆ ಫೆ. 14ರಂದು ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಳ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ. ರಾಮಕೃಷ್ಣ ರೈಯವರ ಸ್ವಾಗತದ ಬಳಿಕ ಮಾತನಾಡಿದ ಸಮ್ಮೇಳನದ ಅಧ್ಯಕ್ಷ ಲ. ಗಂಗಾಧರ ರೈ ಎಸ್. ಮಾತನಾಡಿ ಮುಖ್ಯ ಅತಿಥಿಯಾಗಿ ಮಲ್ಟಿಪಲ್ ಕೌನ್ಸಿಲ್ ಪೂರ್ವಾಧ್ಯಕ್ಷ ಲ. ವಸಂತಕುಮಾರ್ ಶೆಟ್ಟಿ ಭಾಗವಹಿಸಿದರೆ, ಗೌರವ ಅತಿಥಿಯಾಗಿ ಮಾಜಿ ಜಿಲ್ಲಾ ಗವರ್ನರ್ ಲ. ಎಂ.ಬಿ. ಸದಾಶಿವ ಮತ್ತು ನಿವೃತ್ತ ಬಿ.ಇ.ಒ ರಮೇಶ್ ಬಿ.ಇ ಮಂಡ್ಯ ಮುಖ್ಯ ಭಾಷಣಗಾರರಾಗಿ ಭಾಗವಹಿಸಲಿದ್ದಾರೆ.















ಸಮ್ಮೇಳನವನ್ನು ಮಾಧ್ಯಮದ ಮೂಲಕ ಪ್ರಚಾರಪಡಿಸುವಂತೆ ತಿಳಿಸಿದರು. ಸಮೇಳನದ ಸಮಿತಿ ಅಧ್ಯಕ್ಷ ಲ. ಜಯಪ್ರಕಾಶ್ ರೈ ಎನ್. ಮಾತನಾಡಿ ಲಯನ್ ಜಿಲ್ಲೆ 317-D, ವಲಯ 5ರ ಪ್ರಾಂತ್ಯ 1ರ ಸಮ್ಮೇಳನದಲ್ಲಿ 7 ಕ್ಲಬ್‌ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಅವರ ಕುಟುಂಬಸ್ಥರು ಒಟ್ಟು ಸುಮಾರು 400 ಮಂದಿ ಭಾಗವಹಿಸಲಿದ್ದು, ಪ್ರಾಂತ್ಯದ ಮೊದಲ ಮಹಿಳೆ ಶ್ರೀಮತಿ ವೇದಾವತಿ ಜಿ.ರೈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 7 ಕ್ಲಬ್‌ಗಳ ವ್ಯಾಪ್ತಿಯ ತಲಾ ಒಬ್ಬ ಲಯನೇತರ ಸಾರ್ವಜನಿಕ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ 4ರಿಂದ 5.15ರ ತನಕ ನೋಂದಣಿ, ಉಪಹಾರ ಮತ್ತು ಮನೋರಂಜನಾ ಆಟ, 5.30ರಿಂದ ಬ್ಯಾನರ್ ಪ್ರದರ್ಶನ, 6.00ರಿಂದ 8.30ರ ತನಕ ಸಮ್ಮೇಳನ ನಡೆಯಲಿದೆ. ಬಳಿಕ ಮನೋರಂಜನಾ ಕಾರ್ಯಕ್ರಮ, ಸಹ ಭೋಜನ ನಡೆಯಲಿದೆ. ಸೇವಾಕಾರ್ಯವಾಗಿ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ತಂಗುದಾಣದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಕೋಶಾಧಿಕಾರಿ ಲ. ದೊಡ್ಡಣ್ಣ ಬರೆಮೇಲು, ಸುಳ್ಯ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಲ. ರಾಮಚಂದ್ರ ಪಲ್ಲತ್ತಡ್ಕ, ಕೋಶಾಧಿಕಾರಿ ಲ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಲ. ದೀಪಕ್ ಕುತ್ತಮೊಟ್ಟೆ ವಂದಿಸಿದರು.










