ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವ- ದೊಡ್ಡ ದರ್ಶನ ಬಲಿ ಉತ್ಸವ ಬಟ್ಟಲು ಕಾಣಿಕೆ

0

ಇಂದು ರಾತ್ರಿ ಭೂತ ಬಲಿ ಉತ್ಸವ,ವಸಂತ ಕಟ್ಟೆ ಪೂಜೆ ಹಾಗೂ ಬೆಡಿ ಸೇವೆ

ಆಲೆಟ್ಟಿ ಶ್ರೀ ಸದಾಶಿವ ದೇವರ ಕಾಲಾವಧಿ ‌ಜಾತ್ರೋತ್ಸವದ ನಾಲ್ಕನೇಯ ದಿನವಾದ ಇಂದು ಬೆಳಗ್ಗೆ ಶ್ರೀ ದೇವರ ದೊಡ್ಡ ದರ್ಶನ ಬಲಿ ಉತ್ಸವವಾಗಿ ಬಟ್ಟಲು‌ ಕಾಣಿಕೆಯಾಗಿ ರಾಜಾಂಗಣ ಪ್ರಸಾದ ವಿತರಣೆಯಾಯಿತು. ಬಳಿಕ ಶ್ರೀ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಈ ದಿನ ರಾತ್ರಿ ವಿಶೇಷವಾಗಿ ಶ್ರೀ ದೇವರ ಭೂತ ಬಲಿ ಉತ್ಸವವು ನಡೆಯಲಿದೆ. ಬಳಿಕ ವಸಂತ ಕಟ್ಟೆ ಪೂಜೆ ನಡೆದು ವಿಶೇಷವಾಗಿ (ಆಲೆಟ್ಟಿ ಬೆಡಿ) ಬೆಡಿ ಸೇವೆಯು ನಡೆಯಲಿರುವುದು. ರಾತ್ರಿ ವೇಳೆಯಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆಯಾಗಲಿರುವುದು