ಐವರ್ನಾಡು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಅಭ್ಯಾಸ ವರ್ಗ ಕಾರ್ಯಕ್ರಮ

0

ಐವರ್ನಾಡು ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಐವರ್ನಾಡು ಶಕ್ತಿಕೇಂದ್ರದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಅಭ್ಯಾಸವರ್ಗವು ಫೆ. 16ರಂದು ಅಭ್ಯಾಸ ವರ್ಗವನ್ನು ವಿದ್ಯುಕ್ತವಾಗಿ ಐವರ್ನಾಡಿನ ಮಾಜಿ ಸೈನಿಕರಾದ ವೀರಪ್ಪ ಗೌಡ ಕೊಯಿಲ ಉದ್ಘಾಟಿಸಿದರು.


ಮೂರು ಅವಧಿಯ ಗೋಷ್ಠಿಯಲ್ಲಿ, ಬಿಜೆಪಿ ಯ ಸೈದ್ಧಾಂತಿಕ ಭೂಮಿಕೆ ವಿಚಾರದ ಕುರಿತು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಕಾರ್ಯಕರ್ತ ಎಂಬ ವಿಷಯದ ಕುರಿತು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಯತೀಶ್ ಆಳ್ವ, ಪಂಚ ಪರಿವರ್ತನೆ ಎಂಬ ವಿಷಯದ ಕುರಿತು ರಾಜೇಶ್ ಮೇನಾಲ ನಡೆಸಿಕೊಟ್ಟರು.

ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ, ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಜೇನು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚರ್, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನುಪ್ ಬಿಳಿಮಲೆ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಸದಸ್ಯರಾದ ದಿವ್ಯ ಮಡಪ್ಪಾಡಿ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಸದಸ್ಯ ಕಿಶನ್ ಜಬಳೆ, ಐವನಾಡು ಶಕ್ತಿ ಕೇಂದ್ರದ ಸಂಚಾಲಕರಾದ ನಂದಕುಮಾರ್ ಬಾರೆತ್ತಡ್ಕ,ಎಪಿಯಂಸಿ ಉಪಾಧ್ಯಕ್ಷ ನವೀನ್ ಸಾರಕೆರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರು ಮಹಾಮಂಡಲದ ನಿರ್ದೇಶಕರಾದ ಚಂದ್ರ ಕೋಲ್ಚಾರ್, ಪ್ರಗತಿಪರ ಕೃಷಿಕ ನವೀನ್ ಚಾತುಬಾಯಿ, ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತ ಶ್ರೀನಿವಾಸ ಮಡ್ತಿಲ ಹಾಗೂ ಆರು ಬೂತಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಗೌರವಿಸಲಾಯಿತು.
ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.