ಮಾಜಿ ಸಚಿವ ರಮಾನಾಥ್ ರೈ ಹಾಗೂ ಡಿಸಿಸಿ ನಾಯಕರು ಭಾಗಿ
ಪಕ್ಷದ ಕಾರ್ಯಕರ್ತರ ಹಾಗೂ ಪಕ್ಷತೀತವಾಗಿ ಜನರ ಕಷ್ಟಕ್ಕೆ ಸ್ಪಂದನೆ ನನ್ನ ಮೊದಲ ಆದ್ಯತೆ :ರಾಧಾಕೃಷ್ಣ ಬೊಳ್ಳೂರು
ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಗೊಂಡಿರುವ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ 24 ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಪದಾಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೂತನವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರಾಧಾಕೃಷ್ಣ ಬೊಳ್ಳೂರುರವರು ಫೆ 20 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಮಾಜಿ ಸಚಿವ ರಮಾನಾಥ್ ರೈ ಹಾಗೂ ಡಿ ಸಿ ಸಿ ಅಧ್ಯಕ್ಷರಾದ ಹರೀಶ್ ಕುಮಾರ್,ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಸುಳ್ಯ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ ಸೇರಿದಂತೆ ಜಿಲ್ಲೆ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸುವ, ಕಾರ್ಯಕರ್ತರ ಭಾವನೆಗೆ ತಕ್ಕಂತೆ ಪಕ್ಷವನ್ನು ಸಂಘಟಿಸುವ ಅದೇ ರೀತಿ ಪಕ್ಷಾತೀತವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ಆದ್ಯತೆಯಾಗಲಿದೆ ಎಂದು ಅವರು ಹೇಳಿದರು.















ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಪ್ರಾಮಾಣಿಕ ಪ್ರಯತ್ನದ ಮೂಲಕ ಮಾಡಲಾಗುವುದು.
ಮುಂಬರುವ ದಿನಗಳು ಚುನಾವಣಾ ಪರ್ವ ಕಾಲಗಳಾಗಿದ್ದು ತಾ. ಪಂ, ಜಿ ಪಂ, ಗ್ರಾ. ಪಂ ಚುನಾವಣೆ ಈಗೆ ಬೇರೆ ಬೇರೆ ಚುನಾವಣೆಗಳು ಇದ್ದು ಅದನ್ನು ಎದುರಿಸಲು ಪಕ್ಚವನ್ನು ಸಜ್ಜುಗೊಳಿಸಿ ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಲು ನಾವು ಸಿದ್ದರಾಗಲಿದ್ದೇವೆ ಎಂದರು.
ಎಲ್ಲಾ ನಾಯಕರ, ಕಾರ್ಯಕರ್ತರ, ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಪಕ್ಷದಲ್ಲಿ ಯಾವುದೇ ಬಣ ಇಲ್ಲ. ಅಂದು ಇಬ್ಬರು ಸಂಯೋಜಕರು ಸುಳ್ಯಕ್ಕೆ ನೇಮಕವಾದಾಗ ಸಹಜ ವಾಗಿ ಅಲ್ಪ ಸಮಸ್ಯೆ ಆಗಿತ್ತು. ಈಗ ಎಲ್ಲರೂ ಒಟ್ಟಾಗಿದ್ದೇವೆ.ಈಗ ಯಾವುದೇ ಬಣ ಇಲ್ಲ.
ಸುಳ್ಯ ತಾಲೂಕಿನ ಹಾಗೂ ನಗರದ ಮುಖ್ಯವಾದ ಕೆಲವು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ,
ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇವೆ.ಇದಕ್ಕಾಗಿ ಸಚಿವರಗಳನ್ನು ಸಂಬಂಧಪಟ್ಟವರನ್ನು ಭೇಟಿ ಮಾಡಲಾಗುವುದು.
ಜನರ ಪರವಾಗಿ, ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ನಿರಂತರ ಹೋರಾಟ ಮಾಡುತ್ತೇವೆ ಎಂದರು.
110 ಕೆವಿ ವಿದ್ಯುತ್ ಲೈನ್‌ನ ತಾಂತ್ರಿಕ ಸಮಸ್ಯೆ ಗಳನ್ನು ಪರಿಹರಿಸಿ ತುರ್ತಾಗಿ ಅನುಷ್ಠಾನ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು. ಪಯಸ್ವಿನಿ ನದಿಯಲ್ಲಿ ಜಲಚರಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮುಖಂಡರಾದ
ಭವಾನಿಶಂಕರ ಕಲ್ಮಡ್ಕ, ಶಾಫಿ ಕುತ್ಮೊಟ್ಟೆ, ನಂದರಾಜ ಸಂಕೇಶ್, ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ನ.ಪಂ.ಸದಸ್ಯ ಧೀರಾ ಕ್ರಾಸ್ತಾ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಜಯಪ್ರಕಾಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.










