ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಸಭಾಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಫೆ.21 ರಂದು ನಡೆಯಿತು.















ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ಉದ್ಯಮಿಗಳಾದ ಸುಧಾಕರ್ ಕಾಮತ್ ವಿನೋಬನಗರ, ಯೋಜನಾ ಅಧಿಕಾರಿ ಮಾಧವ ಗೌಡ, ಜೀರ್ನೋದ್ಧಾರ ಸಮಿತಿ ಅಧ್ಯಕ್ಷ ಕಸ್ತೂರಿ ಶಂಕರ್, ಕಾರ್ಯದರ್ಶಿ ಪ್ರಸಾದ್ ಎ ಎಸ್, ಭಜನಾ ಮಂದಿರ ಸಮಿತಿ ಅಧ್ಯಕ್ಷ ವಿಶ್ವನಾಥ ಕೆ, ಕಾರ್ಯದರ್ಶಿ ಅನುರಾಧ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಗಳು, ಊರಿನ ಎಲ್ಲಾ ಹಿರಿಯ ಕಿರಿಯ ಮುಖಂಡರುಗಳು ಉಪಸ್ಥಿತರಿದ್ದರು.
ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಈ ಸಭಾಭವನ ನಿರ್ಮಾಣಗೊಳ್ಳಲಿದ್ದು ಮೇ ತಿಂಗಳಲ್ಲಿ ಶ್ರೀ ಗಜಾನನ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು ಆ ದಿನದಂದು ಸಭಾ ಭವನ ಉದ್ಘಾಟನೆ ಗೊಳ್ಳಲಿದೆ ಎಂದು ತಿಳಿದು ಬಂದಿದೆ.










