ಸುಳ್ಯ ಕಬ್ಬಡಿ ಉತ್ಸವ 2025 ಇದರ ಪೋಸ್ಟರ್ ಬಿಡುಗಡೆ

0

ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬ್ಬಡಿ ಅಸೋಸಿಯೇಷನ್, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಅಂತರ್ ರಾಜ್ಯ ಮಟ್ಟದ ಎಂಟು ತಂಡಗಳ ಮಾದರಿಯ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ ಕಬ್ಬಡಿ ಪಂದ್ಯಾಟವು ಮಾರ್ಚ್ 29 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ನಡೆಯಲಿದ್ದು, ಇದರ ಪೋಸ್ಟರ್ ಬಿಡುಗಡೆ ಸಮಾರಂಭವು ಇಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರಿನ ಮೈದಾನದಲ್ಲಿ ನಡೆಯಿತು.

ಸುಳ್ಯ ಕಬ್ಬಡಿ ತಂಡದ ಗೌರವಾಧ್ಯಕ್ಷ ಅಕ್ಷಯ್ ಕೆ. ಸಿ. ಸ್ಟಿಕ್ಕರ್ ಬಿಡುಗಡೆಗೊಳಿಸಿದರು. ಗೌರವ ಸಲಹೆಗಾರರದ ಡಾ. ಲೀಲಾದರ್ ಡಿ.ವಿ., ಹಾಗೂ ಕಾರ್ಯಕ್ರಮದ ಸಂಘಟಕರು ಉಪಸ್ಥಿತರಿದ್ದರು.