ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯದ ಆಶ್ರೀತ್ ಎ ಸಿ ರಾಷ್ಟ್ರಮಟ್ಟದ ಪ್ರಶಸ್ತಿ

0

ಸ್ನೇಹ ಸಂಗಮ ಯೋಗ ಬಳಗ ಮತ್ತು ಪತಂಜಲಿ ಯೋಗ ಕೇಂದ್ರ ಹಾಗೂ ಭುವನ್ ರಾಜ್ ಪೌಂಡೇಶನ್ ಮೈಸೂರು ಸಹಯೋಗದೊಂದಿಗೆ ಫೆ.23ರಂದು ಮೈಸೂರಿನಲ್ಲಿ ನಡೆದ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆಶ್ರೀತ್ ಎ. ಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಚೇತನ್ ಅಮೆಮನೆ ಹಾಗೂ ದಿವ್ಯಚೇತನ್ ದಂಪತಿಗಳ ಪುತ್ರ. ಇವರಿಗೆ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯದ ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜ ಸಂತೋಷ್ ತರಬೇತಿ ನೀಡಿರುತ್ತಾರೆ.