ಪಂಜ ಲಯನ್ಸ್ ಕ್ಲಬ್ ಗೆ ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

0

ಏನೆಕಲ್ಲಿನಲ್ಲಿ ದಿ.ಶಿವಪ್ಪ ಗೌಡ ಪಳಂಗಾಯ ಸ್ಮರಣಾರ್ಥ ಬಸ್ಸು ತಂಗುದಾಣ ಲೋಕಾರ್ಪಣೆ

“ಪಂಜ ಲಯನ್ಸ್ ಕ್ಲಬ್ ಗೆ ಲಯನ್ಸ್ ರಾಜ್ಯಪಾಲರಾಗಿರುವ ಲ.ಬಿ.ಎಮ್ ಭಾರತಿ PMJFD8 ರವರು ಪಂಜ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ಕಾರ್ಯಕ್ರಮ ಫೆ.26 ರಂದು ನಡೆಯಿತು. ಈ ಸಂದರ್ಭದಲ್ಲಿ ಕ್ಲಬ್ ನ ವತಿಯಿಂದ ನಡೆಯುವ ಹಲವಾರು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದರು .ಏನೆಕಲ್ಲಿನ ಪುಂಡಿಗದ್ದೆಯಲ್ಲಿ ನೂತನವಾಗಿ ನಿರ್ಮಿಸಿರುವ ದಿ.ಶಿವಪ್ಪ ಗೌಡ ಪಳಂಗಾಯ ಸ್ಮರಣಾರ್ಥ ಬಸ್ಸು ತಂಗುದಾಣ ವನ್ನು ರಾಜ್ಯಪಾಲರು ಲೋಕಾರ್ಪಣೆ ಗೊಳಿಸಿದರು.

ನಂತರ ಪಂಜದ ಲಯನ್ಸ್‌ ಭವನದಲ್ಲಿ ನಡೆಯುವ ಅಧಿಕೃತ ಭೇಟಿಯ ಸಮಾರಂಭ ನಡೆಯಿತು. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.

ಲಯನ್ಸ್ ರಾಜ್ಯಪಾಲರಾಗಿರುವ ಲ.ಬಿ.ಎಮ್ ಭಾರತಿ PMJFD8 ದೀಪ ಬೆಳಗಿಸಿ ಉದ್ಘಾಟಿಸಿದರು.ವಲಯಾಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಲ. ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ಲ.ಗಂಗಾಧರ ರೈ ಹಾಗೂ ಪಂಜ ಲಯನ್ಸ್ ಕ್ಲಬ್ ನ ನಿಕಟಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಮೋಹನ್ ಕೂಟಾಜೆ, ಕೋಶಾಧ್ಯಕ್ಷ ಸುರೇಶ್ ನಡ್ಕ ಉಪಸ್ಥಿತರಿದ್ದರು ಯ.ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಗೆ ನಿರಂತರ ಅಕ್ಕಿ ನೀಡುವ ಯೋಜನೆಯಾದ ‘ಅನ್ನಭಾಗ್ಯ’ ಯೋಜನೆ, ಬಡರೋಗಿಯೋರ್ವರಿಗೆ ವೀಲ್ ಚಯರ್ ಹಸ್ತಾಂತರ, ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರ, ಯುವ ಸಾಧಕರಿಗೆ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ನಾಗೇಶ್ ಕಿನ್ನಿಕುಮೇರಿ ಸ್ವಾಗತಿಸಿದರು.ಮೋಹನ್ ಕೂಟಾಜೆ ವಂದಿಸಿದರು.