
ಸ.ಹಿ.ಪ್ರಾ ಮುರುಳ್ಯ ಶಾಂತಿನಗರದಲ್ಲಿ ಸೆ. 28ರಂದು ವಿಜ್ಞಾನ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪುಟ್ಟಣ್ಣಗೌಡ ಅಲೆಕ್ಕಾಡಿ ಚಾಲನೆ ನೀಡಿದರು.
ವಿದ್ಯಾರ್ಥಿಗಳೇ ಆವಿಷ್ಕರಿಸಿದ ವಿಜ್ಞಾನ ಮಾದರಿಗಳನ್ನು ಪೋಷಕರು, ಶಾಲಾಭಿಮಾನಿಗಳು ವಿಕ್ಷಿಸಿ ಮೆಚ್ಚುಗೆ ವ್ಯಕ್ತ ಪಡೆಸಿದರು.
ಹಿರಿಯರು ಬಳಸುತ್ತಿದ್ದ ಪುರಾತನದ ಅನೇಕ ವಸ್ತುಗಳನ್ನು ಪ್ರದರ್ಶಿಸಿ ಮಕ್ಕಳ ಸಂಭ್ರಮದಲ್ಲಿ ಶಿಕ್ಷಕರು ಪೋಷಕರು ಭಾಗಿಯಾದರು.
















ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ನಡುಬೈಲು, ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಮುಖ್ಯ ಶಿಕ್ಷಕಿ ಸೀತಾ ವಿ, ಹಿರಿಯ ಶಿಕ್ಷಕಿ ಉಷಾ ಹೇಮಳ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ ಪ್ರತಿಜ್ಞಾವಿಧಿ ಭೋದಿಸಿ, ವಿಜ್ಞಾನಿಗಳ ಸಾಧನೆಯನ್ನು ವಿವರಿಸಿದರು. 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಸಾಧಕರ ಸಾಧನೆಯನ್ನು ವ್ಯಕ್ತ ಪಡಿಸಿದರು.

ಶಿಕ್ಷಕಿ ಕು. ಹರ್ಷಿತ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು ಕಾರ್ಯಕ್ರಮದ ನಿರ್ವಾಹಣೆ ವಹಿಸಿಕೊಂಡರು.










