ಸುಳ್ಯದ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶದ ಸಹಕಾರ ಸಂಘದ ಚುನಾವಣೆ ಮಾರ್ಚ್ 1ರಂದು ಸುಳ್ಯದ ಗಿರಿದರ್ಶಿನಿ ಸಭಾಂಗಣದಲ್ಲಿ ನಡೆದಿದ್ದು, ಮತ ಎಣಿಕೆ ಮುಗಿದ ಬಳಿಕ ಬಿಜೆಪಿ ನಾಯಕರಿಂದ ವಿಜಯೋತ್ಸವ ನಡೆಯಿತು.















ಬಿಜೆಪಿ ಬೆಂಬಲಿತ ವಿಜೇತ ಅಭ್ಯರ್ಥಿಗಳಾದ ಐತ್ತಪ್ಪ ಎನ್ ಕಳಂಜ ಕ್ಷೇತ್ರ, ಹರ್ಷಿತ್ ಡಿ ಅಜ್ಜಾವರ, ಪುಂಡರೀಕ ಕೆ.ಆರ್ ಆಲೆಟ್ಟಿ, ಮಿಥುನ್ ಸುಳ್ಯ ಇವರನ್ನು ಕೇಸರಿ ಶಾಲು ಹಾಕಿ ಅಭಿನಂದಿಸಲಾಯಿತು. ನಗರ ಪಂಚಾಯತ್ ಉಪಾಧ್ಯಕ್ಷ ಜಿ.ಬಿ. ನಾಯ್ಕ್, ಬಿಜೆಪಿ ನಾಯಕ ದಾಮೋದರ ಮಂಚಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಬಿಜೆಪಿ ನಾಯಕರಾದ ಸುದರ್ಶನ್ ಪಾತಿಕಲ್ಲು, ಲ್ಯಾಂಪ್ ಮಾಜಿ ಉಪಾಧ್ಯಕ್ಷೆ ರೇವತಿ ದೊಡ್ಡೇರಿ, ಶ್ರೀಪತಿ ಭಟ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










