
ಕನಕ ಮಜಲು ಗ್ರಾಮ ಪಂಚಾಯತ್ ಮುಂಭಾಗದ ಮುಖ್ಯ ರಸ್ತೆ ಹಾಗೂ ಪರಿಸರಗಳಲ್ಲಿ ರಾತ್ರಿ ಸಮಯ ಯಾವುದೇ ಬೀದಿ ದೀಪಗಳು ಅಥವಾ ರಸ್ತೆ ಬದಿಯಲ್ಲಿರುವ ಮನೆಗಳ ಅಂಗಳದಲ್ಲಿ ಲೈಟುಗಳು ಉರಿಯದೆ ಇರುವ ಕಾರಣ ಇಡೀ ವ್ಯಾಪ್ತಿ ಕತ್ತಲು ಮಯ ಗೊಂಡಿರುತ್ತದೆ.

ಇತ್ತೀಚಿಗೆ ಕಳೆದ ಕೆಲವು ದಿನಗಳ ಹಿಂದೆ ಈ ಭಾಗದಲ್ಲಿ ಕಳ್ಳತನಗಳು ಹಾಗೂ ವಾಹನ ಅಪಘಾತಗಳಂತಹ ಘಟನೆಗಳು ನಡೆದಿದ್ದು ಆರೋಪಿಗಳನ್ನು ಪತ್ತೆಹಚ್ಚಲು ಅಥವಾ ಪ್ರಕರಣದ ಬಗ್ಗೆ ಮಾಹಿತಿ ಕಂಡುಹಿಡಿಯಲು ಪೊಲೀಸ್ ಇಲಾಖೆಗೆ ಸಮಸ್ಯೆಗಳು ಆಗಿತ್ತು.















ಆದ್ದರಿಂದ ಸಂಬಂಧಪಟ್ಟ ಪಂಚಾಯತ್ ನವರು ಹಾಗೂ ಸ್ಥಳೀಯ ಮನೆಯ ನಿವಾಸಿಗಳು ರಾತ್ರಿ ವೇಳೆ ಲೈಟ್ ಗಳನ್ನು ಆನ್ ಮಾಡಿ ಇಡುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಪರಿಸರವನ್ನು ಕಾಯ್ದು ಕೊಳ್ಳಬೇಕಾಗಿದೆ ಎಂದು ಸ್ಥಳೀಯರ ಮನವಿಯಾಗಿದೆ.











