ಬೀಡಾಡಿ ಗೋವುಗಳಿಂದ ತೊಂದರೆ, ನದಿ ನೀರಿನಿಂದ ರಸ್ತೆ ಕೊರೆತ, ಗ್ರಾಮ ಸಭೆ ಕೋರಂ ಬಗ್ಗೆ ಚರ್ಚೆ
ಕೊಳವೆ ಬಾವಿಗೆ ಕಲ್ಲು ಹಾಕಿದವರಾರು!?

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಗ್ರಾಮ ಸಭೆ ಮಾ.4 ರಂದು ನಡೆಯಿತು .















ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ ವಹಿಸಿದ್ದರು.
ನೊಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಸದಸ್ಯರಾದ ಪೃಥ್ವಿಚಂದ್ರ ಮುಂಡಾಜೆ, ಬಿಂದು ಪಿ, ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ, ಪಿಡಿಒ ಶ್ಯಾಮ್ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಇಲಾಖಾಧಿಗಳಾದ ಮೆಸ್ಕಾಂ ನ ಚಿದಾನಂದ ಕನ್ನಡ್ಕ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಅರಣ್ಯ ಇಲಾಖೆಯ ಮನೋಜ್, ಸಿ.ಡಿ.ಪಿ.ಒ ಇಲಾಖೆಯ ಉಷಾ ರೈ , ಕಂದಾಯ ಇಲಾಖೆಯ ಮಧು , ಪಶು ಆಸ್ಪತ್ರೆಯ ಡಾ.ವೆಂಕಟಾ ಚಲಪತಿ ಉಪಸ್ಥಿತರಿದ್ದರು.
ಗ್ರಾಮ ಸಭೆಯಲ್ಲಿ
ಬೀಡಾಡಿ ಗೋವುಗಳ ತೊಂದರೆ, ನದಿ ನೀರಿನಿಂದ ರಸ್ತೆ ಕೊರೆತ, ಗ್ರಾಮ ಸಭೆ ಕೋರಂ ಬಗ್ಗೆ ಚರ್ಚೆ,
ಗ್ತಾ.ಪಂ ನ ಕೊಳವೆ ಬಾವಿಗೆ ಕಲ್ಲು ಹಾಕಿದ ಬಗ್ಗೆ ಚರ್ಚೆ ನಡೆಯಿತು.










