














ಇತ್ತೀಚೆಗೆ ಐವರ್ನಾಡಿನಲ್ಲಿ ನಡೆದ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ಲಕ್ಕಿ ಕೂಪನ್ ಡ್ರಾ ದ ಪ್ರಥಮ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರಾದ ಶಿವಪ್ರಸಾದ್ ಕಳಂಜರವರು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥರವರಿಂದ ನಗದು ಬಹುಮಾನ ರೂ.20,000 ಪಡೆದುಕೊಂಡರು.

ಬಳಿಕ ಪಡೆದುಕೊಂಡ ನಗದು ಹಣದಿಂದ ರೂ.5,000 ವನ್ನು ಗೆಳೆಯರ ಬಳಗಕ್ಕೆ ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ,ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ಮತ್ತು ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










