ಮಾ. 25 ರಿಂದ ಎ. 10:ಪೆರಾಜೆ ಶ್ರೀ ಶಾಸ್ತಾವು ದೇವರ ಕಾಲಾವಧಿ ಜಾತ್ರೋತ್ಸವ-ಆಮಂತ್ರಣ ಬಿಡುಗಡೆ

0

ಮಾ. 9 ರಂದು ಗೊನೆ ಮುಹೂರ್ತ

ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಕಾಲಾವಧಿ ಜಾತ್ರೋತ್ಸವವು ಮಾ. 25 ರಿಂದ ಎ. 10 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಬಿಡುಗಡೆ ಇಂದು ದೇವಳದಲ್ಲಿ ನಡೆಯಿತು.

ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ಅಧ್ಯಕ್ಷತೆ ವಹಿಸಿದ್ದರು. . ದೇವತಕ್ಕರಾದ ರಾಮಕಜೆ ರಾಜಗೋಪಾಲಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಕಾರ್ಯದರ್ಶಿ ತೇಜಪ್ರಸಾದ ಅಮೆಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ ಮೊಕ್ತೇಸರರುಗಳಾದ ಲೋಕನಾಥ ಅಮೆಚೂರು, ವಿಶ್ವನಾಥ ಕುಂಬಳಚೇರಿ, ನಾಗೇಶ ಕುಂದಲ್ಪಾಡಿ, ತಕ್ಕ ಮುಖ್ಯಸ್ಥರುಗಳಾದ ಭಾಸ್ಕರ ಕೋಡಿ, ಪುರುಷೋತ್ತಮ ನಿಡ್ಯಮಲೆ, ಕೆ.ಡಿ ಕುಶಾಲಪ್ಪ ಕುಂಬಳಚೇರಿ ಹಾಗೂ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.