















ಹಾಲೆಮಜಲು ಪ್ರೀಮಿಯರ್ ಲೀಗ್ ೬ ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಎಚ್ ಪಿ ಎಲ್ ಟ್ರೋಫಿ ೨೦೨೫ ಇದರ ಸಮಾರೋಪ ಸಮಾರಂಭವು ಗುತ್ತಿಗಾರಿನಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಪಂದ್ಯಾಟದ ಸಂಚಾಲಕ ಆಶಿಕ್ ಚೆಮ್ನೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ವೈದ್ಯಾಧಿಕಾರಿಗಳಾದ ಡಾ. ನಂದಕುಮಾರ್ ಬಿ., ಸುಬ್ರಮಣ್ಯ ಕುಮಾರಸ್ವಾಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ದಿನಕರ ದೇರಪಜ್ಜನಮನೆ ಉಪಸ್ಥಿತರಿದ್ದರು.

ಗೌರವ ಉಪಸ್ಥಿತಿಯಲ್ಲಿ ಉದ್ಯಮಿ ಕಿರಣ್ ಬುಡ್ಲೆಗುತ್ತು ವೇದಿಕೆಯಲ್ಲಿದ್ದರು. ಪಂದ್ಯಾಟದಲ್ಲಿ ಉಜ್ವಲ ಬಲ್ಲಡ್ಕ ಮಾಲಕತ್ವದ ರಾಯಲ್ ಕೇಕ್ ಹೌಸ್ ಪ್ರಥಮ, ಆದರ್ಶ ಕುಳ್ಳಂಪಾಡಿ ಮಾಲಕತ್ವದ ಡಿಕೆ ಡೆವಿಲ್ಸ್ ದ್ವಿತೀಯ, ಶಿವಪ್ರಸಾದ ಹಾಲಮಜಲು ಮಾಲಕತ್ವದ ಪವರ್ ಪ್ಲಾಸ್ಟರ್ಸ್ ತೃತೀಯ ಸ್ಥಾನ ಪಡೆಯಿತು. ಅತಿಥಿಗಳು ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು. ಚಿತ್ರ ವರದಿ ಡಿ ಹೆಚ್.











