ಗ್ರಾಮ ಪಂಚಾಯತ್ ಅಜ್ಜಾವರದಲ್ಲಿ ಮಹಿಳಾ ಗ್ರಾಮ ಸಭೆಯು ಅಧ್ಯಕ್ಷರಾದ ಶ್ರೀಮತಿ ದೇವಕಿ ವಿಷ್ಣುನಗರರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ವಿಜಯ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಇವರು ಮಹಿಳಾ ಗ್ರಾಮ ಸಭೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಡೆಲ್ ಮತ್ತು ಶಿಕ್ಷಣ ಪೌಂಡೇಶನ್ ನ ಜಿಲ್ಲಾ ಸಂಯೋಜಕರಾದ ಲವೀಶ್ ಕುಮಾರ್ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು.















ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲ ಎ, ಸದಸ್ಯರಾದ ಸತ್ಯವತಿ, ಲೀಲಾ ಮನಮೋಹನ, ದಿವ್ಯ ಹೆಚ್, ಪಿಡಿಓ ಜಯಮಾಲಾ ಸಭೆಯಲ್ಲಿ ಉಪಸ್ಥಿತರಿದ್ದರು. ಅಜ್ಜಾವರ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಡಿಜಿಟಲ್ ಸಾಕ್ಷರತೆ ತರಬೇತಿ ಪಡೆದ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಗ್ರಾಮ ಸಭೆಯಲ್ಲಿ ಗ್ರಾಮದ ಸ್ವಸಹಾಯ ಗುಂಪಿನ ಸದಸ್ಯರುಗಳು, ಗ್ರಾಮಸ್ಥರು,ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಂಥಾಲಯ ಮೇಲ್ವಿಚಾರಕರು, ಪಂಚಾಯತ್ ಸಿಬ್ಬಂದಿ ವರ್ಗ, ಎಂಬಿಕೆ, ಎಲ್ಸಿ ಆರ್ ಪಿ ಭಾಗವಹಿಸಿದ್ದರು. ಪಿಡಿಓ ಜಯಮಾಲಾರವರು ಸ್ವಾಗತಿಸಿ, ವಂದಿಸಿದರು.










