ಮೊರಂಗಲ್ಲು ತರವಾಡಿನ ಗೃಹ ಪ್ರವೇಶ ಹಾಗೂ ನೇಮೋತ್ಸವದ ಕುರಿತು ಬೈಲುವಾರು ಸಮಿತಿಯ ಸಮಾಲೋಚನಾ ಸಭೆ

0

ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಕುಟುಂಬದ ತರವಾಡು ಮನೆಯ ಗೃಹ ಪ್ರವೇಶ ಮತ್ತು ಶ್ರೀ ದೈವಗಳ ನೇಮೋತ್ಸವದ ಪೂರ್ವ ಭಾವಿಯಾಗಿ ಮೊರಂಗಲ್ಲು ಬೈಲಿನ ಉಪ ಸಮಿತಿಗಳ ಸಮಾಲೋಚನಾ ಸಭೆಯು ಮಾ.9 ರಂದು ಮೊರಂಗಲ್ಲು ತರವಾಡು ಮನೆಯಲ್ಲಿ ನಡೆಯಿತು.


ದೈವಸ್ಥಾನದ ಅಧ್ಯಕ್ಷರಾದ ಗುರು ಪ್ರಸಾದ್ ರೈ ಮೊರಂಗಲ್ಲು ಪ್ರಾಸ್ತಾವಿಕ ವಾಗಿ ಮಾತನಾಡಿ ಆಮಂತ್ರಣ ಪತ್ರ ಹಂಚಿಕೆಯ ಹಾಗೂ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಸಮಾಲೋಚಿಸಲಾಯಿತು.ಆರಂಭದ ದಿನದಂದು ಹಸಿರು ವಾಣಿ ಮೆರವಣಿಗೆ,ಸದಾಶಿವ ದೇವಸ್ಥಾನದಿಂದ ಕಟೀಲು ದೇವಿಯ ಮೆರವಣಿಗೆ ಹಾಗೂ ಯಕ್ಷಗಾನ ಬಯಲಾಟ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಪೂರ್ವ ತಯಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೈಲುವಾರು ಸಮಿತಿ ಸಂಚಾಲಕ ಆಶಿಕ್ ರೈ ಮೊರಂಗಲ್ಲು, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಪುರುಷೋತ್ತಮ ಕುಂಚಡ್ಕ, ನಾರಾಯಣ ರೈ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ಶ್ರೀನಾಥ್ ಆಲೆಟ್ಟಿ, ಕೇಶವ ಮೊರಂಗಲ್ಲು, ಗೋಪಾಲಕೃಷ್ಣ ಮೊರಂಗಲ್ಲು, ದೇವಯ್ಯ ಗೌಡ ಮೊರಂಗಲ್ಲು, ನಂಜುಂಡ ದೇವಸ್ಯ, ವೆಂಕಟರಮಣ ಮೊರಂಗಲ್ಲು, ಪ್ರಶಾಂತ್ ರೈ, ಜೆ.ಕೆ.ರೈ ನಾರ್ಕೋಡು, ಬೆಳ್ತ ಮೊರಂಗಲ್ಲು, ಸೀತಾರಾಮ ಮೊರಂಗಲ್ಲು, ನವೀನ್ ಮೊರಂಗಲ್ಲು, ಜಯಪ್ರಕಾಶ್ ಮೊರಂಗಲ್ಲು, ತೀರ್ಥರಾಮ ಮೊರಂಗಲ್ಲು,
ಅಣ್ಣಿ ಪೂಜಾರಿ ಮೊರಂಗಲ್ಲು, ವಿಜಯಕುಮಾರ್ ಆಲೆಟ್ಟಿ, ವಿಜಯ ಮೊರಂಗಲ್ಲು, ಮದನ್ ಕೃಷ್ಣ ಮೊರಂಗಲ್ಲು, ಭೋಜರಾಯ ಆಚಾರ್ಯ ಆಲೆಟ್ಟಿ,
ಶಿವಪ್ರಸಾದ್ ಆಲೆಟ್ಟಿ ಹಾಗೂ ಬೈಲಿನ ಮಹಿಳೆಯರು ಮತ್ತಿತರರು ಉಪಸ್ಥಿತರಿದ್ದರು.