ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಮಾ.1ರಂದು ನಡೆದ ಅಪಘಾತದಲ್ಲಿ ಬೆಟ್ಟಂಪಾಡಿಯ ಗಂಗಾಧರ ಮಣಿಯಾಣಿ ಯವರ ಕಾಲಿಗೆ ಗಂಭೀರ ಗಾಯವಾದ ಘಟನೆ ವರದಿಯಾಗಿದೆ.















ಗಂಗಾಧರ ಮಣಿಯಾಣಿ ಯವರು ಪೇರಾಲಿನಲ್ಲಿರುವ ತಮ್ಮಜಾಗಕ್ಕೆ ಸ್ಕೂಟಿಯಲ್ಲಿ ಹೋಗಿ ಸಂಜೆ 5.30ರ ಸುಮಾರಿಗೆ ಸುಳ್ಯದತ್ತ ಬರುತ್ತಿರುವಾಗ, ಸುಳ್ಯ ಕಡೆಯಿಂದ ಹೇಮಂತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಮಹೇಂದ್ರ ವಾಹನ ಪರಸ್ಪರ ಢಿಕ್ಕಿಯಾಯಿತು.
ಪರಿಣಾಮ ಗಂಗಾಧರ ರು ರಸ್ತೆ ಬದಿಗೆ ಎಸೆಯಲ್ಪಟ್ಟರು. ಪರಿಣಾಮ ಅವರ ಬಲ ಕಾಲಿಗೆ ಗಂಭೀರ ಗಾಯವಾಗಿದ್ದು, ಬಳಿಕ ಅವರನ್ನು ಕಿರಣ ಎಂಬವರು ರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿಚಿಕಿತ್ಸೆ ಕೊಡಿಸಲಾಗಿದೆ.










