ಕನಕಮಜಲು ಅಂಗಡಿ ಕಳವು ಪ್ರಕರಣ : ಊರವರು ಹಿಡಿದ ಇಬ್ಬರು ಕಳ್ಳರಿಗೂ ನ್ಯಾಯಾಂಗ ಬಂಧನ

0

ಕನಕಮಜಲು ಪೇಟೆಯಲ್ಲಿ ಇಂದು ಮುಂಜಾನೆ ಅಂಗಡಿ ನುಗ್ಗಿ ಕಳವುಗೈದ ಇಬ್ಬರು ಕಳ್ಳರನ್ನು ಊರವರು ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಇಂದು ಸಂಜೆ ಪೋಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕನಕಮಜಲು ಪೇಟೆಯಲ್ಲಿರುವ ಗಣೇಶ್ ಸ್ಟೋರ್ ಗೆ ಬೆಳ್ಳಂ ಬೆಳಗೆ ಇಬ್ಬರು ಕಳ್ಳರು ನುಗ್ಗಿದ್ದರು. ಇದು ಊರವರಿಗೆ ಗೊತ್ತಾಗಿ ಊರವರು ಸೇರಿ ಇಬ್ಬರನ್ನು‌ ಹಿಡಿದು ಪೋಲೀಸರಿಗೊಪ್ಪಿಸಿದರು.

ಸಂಜೆ ಆ ಇಬ್ಬರು ಕಳ್ಳರನ್ನು ಕರೆದುಕೊಂಡು ಪೋಲೀಸರು ಸ್ಥಳ ಮಹಜರಿಗೆ ಬಂದರು.‌ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಕಳ್ಳ ತನ ನಡೆಸಿದ ಬಂಟ್ವಾಳ ಸಜೀಪ. ಮೂಲಕ ಸುಹೈಲ್ ಹಾಗೂ ರಿಯಾಜ್ ಮೇಲೆ 4 ಕಳ್ಳತನ ಪ್ರಕರಣ ಇರುವುದಾಗಿ ತಿಳಿದುಬಂದಿದೆ.