ಕ್ರೀಡಾಕೂಟ: ಶಿಕ್ಷಕಿ ಸುಜಯಕುಮಾರಿ ಬಿ.ಡಿ. ರಾಜ್ಯ ಮಟ್ಟಕ್ಕೆ

0

ಕರ್ನಾಟಕ ಸರಕಾರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ , ದಕ್ಷಿಣ ಕನ್ನಡ ಶಾಖೆ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಆರ್‌ಎಂಎಸ್‌ಎ ಸಂಪಾಜೆಯ ದೈಹಿಕ ಶಿಕ್ಷಣ ಶಿಕ್ಷಕಿ ಆಗಿರುವ ಸುಜಯಕುಮಾರಿ ಬಿ.ಡಿ. ಇವರು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.