ಮಾ.25ರಂದು‌ ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷತೆಗೆ ಚುನಾವಣೆ

0

ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ ತೆರವಾಗಿರುವ ಗ್ರಾ.ಪಂ. ಉಪಾಧ್ಯಕ್ಷತೆಗೆ ಮಾ.25ರಂದು ಚುನಾವಣೆ ನಡೆಯಲಿದೆ.

ಪಂಚಾಯತ್ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಕಾಪಿಲರು ಅಸೌಖ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಇದದಿಂದ ಉಪಾಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಆ ಸ್ಥಾನಕ್ಕೆ ಮಾ.25ರಂದು ಚುನಾವಣೆ ನಡೆಯುವುದು.

ಉಪಾಧ್ಯಕ್ಷತೆ ಸಾಮಾನ್ಯ ಮೀಸಲಾತಿಯಾಗಿದ್ದು ಪಂಚಾಯತ್ ನ ಎಲ್ಲ ಸದಸ್ಯರು ಕೂಡಾ ಅರ್ಹರಾಗಿರುತ್ತಾರೆ.

ಮಾ.25ರಂದು‌ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ ನೂತನ ಉಪಾಧ್ಯಕ್ಷರ ಆಯ್ಕೆ ನಡೆಯುವುದು.