ಪ್ರಧಾನ ಮಂತ್ರಿ ವನ್ ವಿಕಾಸ್ ಕೇಂದ್ರ ಮಾರ್ಟ್ ನ ಮೂಲಭೂತ ಸೌಕರ್ಯಕ್ಕೆ ಕ್ರಮ ವಹಿಸಲು ನಿರ್ಣಯ
ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.















ಇತ್ತೀಚೆಗೆ ಆರಂಭಗೊಂಡ ಕರ್ನಾಟಕ ದ ಮೊಟ್ಟ ಮೊದಲ ಪ್ರಧಾನಮಂತ್ರಿ ವನ್ ವಿಕಾಸ ಕೇಂದ್ರದ ಮಾರ್ಟಿನ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದರ ಜೊತೆಗೆ ಉದ್ಘಾಟನೆ ದಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಸ್ತಾಪಿಸಿದ ಮಾಟಿನ ಮುಂಭಾಗದ ಪ್ರದೇಶವನ್ನು ರಾಷ್ಟ್ರೀಯ ಹೆದ್ದಾರಿಗೆ ಕಾಣುವ ಹಾಗೆ ಆವರಣವನ್ನು ವಿಶಾಲಗೊಳಿಸಿ ಮುಂದಿನ ದಿನಗಳಲ್ಲಿ ಹಳ್ಳಿ ತರಕಾರಿ ಸಂತೆಗೆ ಆದ್ಯತೆ ನೀಡಲು ನಿರ್ಣಯಸಲಾಯಿತು.
ಮತ್ತು ಕುಡಿಯುವ ನೀರಿನ ಸಮಸ್ಯೆ,ಬೀದಿ ದೀಪಗಳ ದುರಸ್ತಿ, ಬಾಕಿ ಯಾಗಿರುವ ತೆರಿಗೆ ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಭವಾನಿಚಿಟ್ಟನೂರು, ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಪುಷ್ಪಾದರ ಕೊಡಂಕೇರಿ, ಗಂಗಾಧರ ಗುಂಡ್ಲ ಬನ, ಶ್ವೇತಾ ಅರಮನೆ ಗಾಯ, ಮಾಲಿನಿ ಉಳುವಾರು, ಹರಿಣಿ ದೇರಾಜೆ, ಸುಜಯಾ ಮೇಲಡ್ತಲೆ, ಹಾಜರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಮೊದಲಿಗೆ ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದ್ದರು.










