Home Uncategorized ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು – ರಾಜ್ಯಮಟ್ಟದ ಅತ್ಲೆಟಿಕ್ ಮೀಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು – ರಾಜ್ಯಮಟ್ಟದ ಅತ್ಲೆಟಿಕ್ ಮೀಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ

0

ಟಿಷನ್ ಮಾದಪ್ಪರಿಗೆ ಅವಳಿ ಚಿನ್ನ

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ, ಜೆ.ಎನ್‌.ಎನ್‌.ಸಿ.ಇ, ಶಿವಮೊಗ್ಗದಲ್ಲಿ ನಡೆದನೇ ಸಾಲಿನ ವಿ.ಟಿ.ಯು ರಾಜ್ಯಮಟ್ಟದ ಅಥ್ಲೆಟಿಕ್ ಮೀಟ್‌ನಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್‌ ಕಾಲೇಜು, ಸುಳ್ಯ ಇದರ ಕಂಪ್ಯೂಟಕ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ, 8ನೇ ಸೆಮಿಸ್ಟರ್ ವಿದ್ಯಾರ್ಥಿ ಟಿಷನ್ ಮಾದಪ್ಪ ಅವರು 21 ಕಿಲೋ ಮೀಟರ್ ಹಾಗೂ 5000 ಮಿ. ಓಟದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

10 ಸಾವಿರ ಮಿ. ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುತ್ತಾರೆ. ಕಂಪ್ಯೂಟಕ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ೪ನೇ ಸೆಮಿಸ್ಟರ್ ವಿದ್ಯಾರ್ಥಿನಿ ರೇಷ್ಮಾ ಉದ್ದಜಿಗಿತದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. 4* ೪೦೦ಮೀಟರ್ ಮಿಕ್ಸಡ್ ರಿಲೇಯಲ್ಲಿ ಕಂಪ್ಯೂಟ‌ರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ರಕ್ಷಿತಾ, ಮಂಜುನಾಥ, ವಿಶ್ವೇಶ್‌ ಮತ್ತು ರೇಷ್ಮಾ ೪ನೇ ಸೆಮಿಸ್ಟರ್ ಬೆಳ್ಳಿ ಪದಕವನ್ನು ಗೆದ್ದಿರುತ್ತಾರೆ.

ಇವರ ಸಾಧನೆಗೆ ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ‘ಬಿ’ ಎ.ಪಿ.ಎಲ್. ಇ., ಡಾ. ಜ್ಯೋತಿ ಆರ್. ಪ್ರಸಾದ್ ಸೆಕ್ರೆಟರಿ ಕಮಿಟಿ ‘ಬಿ’ ಎ.ಒ. ಎಲ್.ಇ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟ‌ರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಎಕ್ಸೆಕ್ಯುಟಿವ್ ಡೈರೆಕ್ಟರ್, ಕೆವಿಜಿಡಿಸಿ&ಹೆಚ್. ಮೌರ್ಯ ಆ‌ರ್. ಪ್ರಸಾದ್, ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆ‌ರ್., ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಜೇಶ್ ಡಿ.ಎಸ್‌ ಮತ್ತು ಕ್ರೀಡಾ ಚಟುವಟಿಕೆಗಳ ಮುಖ್ಯ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ. ಹಾಗೂ ಬೋದಕ, ಬೋದಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.


NO COMMENTS

error: Content is protected !!
Breaking