
ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ವತಿಯಿಂದ ದಶ ಸಂಭ್ರಮದ ಕಾರ್ಯಕ್ರಮದ ಪ್ರಯುಕ್ತ ವಿಕಲಚೇತನ ವಿದ್ಯಾರ್ಥಿಗಳಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನ ಶಿವಪ್ರಸಾದ್ ಹಾಗೂ ಯಮುನಾ ದಂಪತಿಗಳ ಮಗಳಾದ ನಿಖಿತಾ ಹಾಗೂ ದಾಸನಮಜಲು ದೇವಿಪ್ರಸಾದ್ ಹಾಗೂ ಸುನಂದಾ ದಂಪತಿಗಳ ಮಗಳಾದ ಚೈತನ್ಯ ಇವರಿಗೆ ಸಹಾಯ ಹಸ್ತ ಮಾ. 30ರಂದು ನೀಡಲಾಯಿತು.















ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು, ಕಾರ್ಯದರ್ಶಿ ಶೋಭಾ ಕುರುಂಬುಡೇಲು, ಕೋಶಾಧಿಕಾರಿ ಕುಸುಮ ಕುರುಂಬುಡೇಲು, ಪದಾಧಿಕಾರಿಗಳಾದ, ಸುಲೋಚನಾ ಪಡ್ಪು, ಭಾರತಿ ಕೊಲಂಬಳ ಉಪಸ್ಥಿತರಿದ್ದರು.










