ಜೀವ ಉಳಿಸಿದ ಉರಗ ಪ್ರೇಮಿ ಮಾಧವ
ಸುಬ್ರಹ್ಮಣ್ಯ ದ ಆದಿ ಸುಬ್ರಹ್ಮಣ್ಯ ಸಮೀಪದ ತೋಟದಲ್ಲಿ ಕಾಳಿಂಗ ಸರ್ಪವೊಂದು ಬಲೆಗೆ ಸಿಲುಕಿದ್ದು, ಜೀವ ಉಳಿಸಲು ಹೋರಾಡುತ್ತಿದ್ದನ್ನು, ಉರಗ ಪ್ರೇಮಿ ಮಾಧವ ಅವರು ಬಂದ ಜೀವ ಉಳಿಸಿದ ಘಟನೆ ಮಾ.31 ರಂದು ನಡೆದಿದೆ.















ಆದಿ ಸುಬ್ರಹ್ಮಣ್ಯದ ಜಾಣಪ್ಪ ಎಂಬವರ ತೋಟವೊಂದರಲ್ಲಿ ಆಹಾರ ಅರಸಿ ಬಂದ ಕಾಳಿಂಗ ಸರ್ಪವೊಂದು ಬಲೆಯೊಳಗೆ ಸಿಕ್ಕಿಕೊಂಡಿತ್ತು. ಹೊಟ್ಟೆಯ ಭಾಗದಲ್ಲಿ ಸುತ್ತಿಕೊಂಡಿದ್ದ ಬಲೆಯನ್ನು ಬಿಡಿಸಲಾಗದೆ ಒದ್ದಾದಿತ್ತು. ಬಳಿಕ ಉರಗ ಪ್ರೇಮಿ ಮಾದವರು ಬಂದು ಬಲೆಯನ್ನು ತುಂಡರಿಸಿ ಎಚ್ಚರಿಕೆಯಿಂದ ಕಾಳಿಂಗ ಸರ್ಪವನ್ನು ಸಜೀವವಾಗಿ ಬಿಡುಗಡೆ ಮಾಡಲು ಯಶಸ್ವಿಯಾದರು.
ಬಲೆಯಿಂದ ಮುಕ್ತಗೊಂಡ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಯಿತು.










