ಚಾಲಕ ಹಾಗೂ ಸಹ ಪ್ರಯಾಣಿಕರು ಅಪಾಯದಿಂದ ಪಾರು















ಓಡಬಾಯಿ :ಮಾಣಿ ಮೈಸೂರು ಹೆದ್ದಾರಿ ಗುಂಡ್ಯಡ್ಕ ಬಳಿ ಏ. 3 ರಂದು ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ 407 ಮಿನಿ ಲಾರಿಯೊಂದು ರಸ್ತೆ ಬದಿಯ ಮೋರಿಗೆ ಬಿದ್ದಿದ್ದು ಘಟನೆಯಿಂದ ವಾಹನ ಜಖಂಗೊಂಡು ಚಾಲಕ ಹಾಗೂ ಸಹ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಬೆಳ್ತಂಗಡಿಯಿಂದ ಕುಶಾಲನಗರ ಕಡೆಗೆ ಹೋಗುತ್ತಿದ್ದ ಈ ವಾಹನದಲ್ಲಿ ಚಾಲಕ ಸೇರಿ ಇನ್ನಿಬ್ಬರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.










