ಧಾರ್ಮಿಕ ಸಭಾ ಕಾರ್ಯಕ್ರಮ – ದೈವಗಳ ಧರ್ಮ ನಡಾವಳಿ – ಪ್ರಸಾದ ವಿತರಣೆ- ಅನ್ನಸಂತರ್ಪಣೆ

ಸುಳ್ಯ ಹಾಗೂ ಕೇರಳದ ಗಡಿ ಪ್ರದೇಶವಾದ ಬಂದಡ್ಕ ಬಳಿಯ ಪಾಲಾರ್ ಗುಂಡ್ಯ ಕುಟುಂಬದವರು ನೂತನವಾಗಿ ನಿರ್ಮಿಸಿದ ದೈವಸ್ಥಾನದ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ದೈವಗಳ ಧರ್ಮನಡವಳಿ ಅದ್ದೂರಿಯಾಗಿ ನಡೆಯಿತು.
ಮಾ28ರಂದು ಪೂ. ಗಂಟೆ 8.00 ಕ್ಕೆ ಉಗ್ರಾಣ ತುಂಬಿಸುವುದು, ಅಪರಾಹ್ನ ವಿವಿಧ ವಾದ್ಯಘೋಷ, ಕುಣಿತ ಭಜನೆಯೊಂದಿಗೆ ಪದಿಕ್ಕಾಲ್ ಕಲ್ಲುರ್ಟಿ ದೈವಸ್ಥಾನದ ಸಮೀಪದಿಂದ ತಂತ್ರಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣಂ ನೂತನ ದೈವಸ್ಥಾನ ಮತ್ತು ನೂತನ ಆಯುಧಗಳನ್ನು ಸ್ವೀಕರಿಸುವುದು, ಮಹಾಸುದರ್ಶನ ಹೋಮ, ಆವಾಹನೆ, ಉಚ್ಚಾಟನೆ, ಪಶುಪುಣ್ಯಾಹ ಪ್ರಾಸಾದ ಶುದ್ದಿ, ಅಸ್ತ್ರಕಲಶ ಪೂಜೆ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಕಲಶಪೂಜೆ, ವಾಸ್ತು ಬಲಿ, ವಾಸ್ತುಕಲಶಾಭಿಷೇಕ, ಮೊದಲಾದವುಗಳು ನಡೆಯಿತು.

ಮಾ.29ರಂದು ಪೂ.ಗಂಟೆ 6.00 ರಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಬಿಂಬ ಶುದ್ಧಿಕಲಶ ಪೂಜೆ, ಬಿಂಬಶುದ್ಧಿ ಕಲಶಾಭಿಷೇಕ, ಖನನಾದಿ ಸ್ಥಳಶುದ್ದಿ, ಕುಂಬೇಶಕರ್ಕರಿಕಲಶ ಪೂಜೆ, ಅನುಜ್ಞಾಕಲಶ ಪೂಜೆ, ಶಯ್ಯಾಪೂಜೆ, ನಿದ್ರಾಕಲಶ ಪೂಜೆ, ವಿಶ್ವೇಶ್ವರ ಪೂಜೆ, ಅನುಜ್ಞಾಕಲಶಾಭಿಷೇಕ, ಅನುಜ್ಞಾಬಲಿ, ಅನುಜ್ಞಾ ಪ್ರಾರ್ಥನೆ, ಜೀವ ಕಲಶ ಪೂಜೆ, ಜೀವೋದ್ವಸನ, ಜೀವಕಲಶ, ಶಯ್ಯೆಯಲ್ಲಿ ಪ್ರದಕ್ಷಿಣೆಯೊಂದಿಗೆ ಇಡುವುದು, ಸರ್ವೈಶ್ವರ್ಯಕ್ಕೆ ಲಕ್ಷ್ಮಿ ಶ್ರೀಸ್ತಕ ಹೋಮ, ಸಂಜೆ ಬ್ರಹ್ಮಕಲಶ ಪೂಜೆ, ಉಪದೈವಗಳ ಕಲಶ ಪೂಜೆ, ಅಧಿವಾಸ ಹೋಮ, ಧ್ಯಾನಾಧಿವಾಸ, ಪೀಠಾಧಿವಾಸ, ಪ್ರಾಸಾದಾಧಿವಾಸ,ಮಂಡಲ ಪೂಜೆ, ಅಧಿವಾಸ ಪೂಜೆ, ಕಲಶಾಧಿವಾಸ, ಅಧಿವಾಸ ಬಲಿ, ತ್ರಿಕಾಲ ಪೂಜೆ, ಪರಿಸಮಾಪ್ತಿ, ಸಾಯಂಕಾಲ ಭಜನೆ (ಉಷಲತ & ಬಳಗದವರಿಂದ, ಕೌಡಿಕಾನ ರಕ್ತಶ್ವರಿ ಭಜನ ಸಂಘ, ಸಾಮೆಕೊಚ್ಚಿ, ರಾಜರಾಜೇಶ್ವರಿ ಭಜನಾ ಸಂಘ ಪಾಲಾರು, ಸರಸ್ವತಿ ಭಜನಾ ಮಂಡಳಿ, ಪಯರಡ್ಕ ನಡೆಯಿತು.

ಮಾ.30ರಂದು ಪೂ. ಗಂಟೆ 5.00 ರಿಂದ ಮಹಾಗಣಪತಿ ಹೋಮ, ಶಯ್ಯೆಯಲ್ಲಿ ಪೂಜೆ, ವಿದ್ಯೆಶ್ವರಕಲಶ ಪ್ರೋಕ್ಷಣೆ, ಪ್ರಾಸಾದಪ್ರತಿಷ್ಠೆ, ಪೀಠಪ್ರತಿಷ್ಠೆ,
ಪೂರ್ವಾಹ್ನ 9.09 ರಿಂದ 11.12ರ ಒಳಗಿನ ರೇವತಿ ನಕ್ಷತ್ರದ ಮೂರನೇ ಪಾದ ವೃಷಭ ರಾಶಿ ಶುಭಮುಹೂರ್ತದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ರುದ್ರಚಾಮುಂಡಿ, ವರ್ಣರ ಪಂಜುರ್ಲಿ, ಕುಪ್ಪೆಪಂಜುರ್ಲಿ, ಮರ್ಲ್‌ಭೂತ, ದೇವತೆ, ಕುಕ್ಕೆತ್ತಿ-ಬಲ್ಲು, ಪಿಲಿಭೂತ, ಕಲ್ಲುರ್ಟಿ, ಗುಳಿಗೆ ಮೊದಲಾದ ಸಾನಿಧ್ಯ ಶಕ್ತಿಗಳ ಪ್ರತಿಷ್ಠೆ ತರವಾಡು ಮನೆಯಲ್ಲಿ ಕಲ್ಲುರ್ಟಿ ದೈವದ ಪ್ರತಿಷ್ಠೆ, ನಂತರ ಕುಂಭೇಶಕಲಶಾಭಿಷೇಕ, ನಿದ್ರಾಶಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪರಿಕಲಶಾಭಿಷೇಕ, ಉಪದೈವವಾಧಿಗಳ ಕಲಶಾಭಿಷೇಕ, ಅರಿತ್ರಾವಲ್, ಪ್ರತಿಷ್ಠಾ ಬಲಿ, ಮಹಾ ಪೂಜೆ, ಮುಂದಿನ ಕಾರ್ಯಕ್ರಮಗಳನ್ನು ನಿಶ್ಚಯಿಸುವುದು ಪ್ರಸಾದ ವಿತರಣೆ ನಡೆಯಿತು.
ಪೂರ್ವಾಹ್ನ 10.00 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಸುರೇಶ್ ಪಿ.ಜಿ. (ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ), ದೀಪ ಪ್ರಜ್ವಲನೆಯನ್ನು ಬ್ರಹ್ಮಶ್ರೀ ಇಲವಲ್ ಕೃಷ್ಣದಾಸ್ ತಂತ್ರಿ ನೆರವೇರಿಸಿದರು.















ಗೌರವ ಉಪಸ್ಥಿತಿಯಲ್ಲಿ ಶ್ರೀನಿವಾಸ ಹೆಬ್ಬಾರ್ (ಪ್ರಧಾನ ಆರ್ಚಕರು, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ), ಸದಾನಂದ ರೈ (ಆಡಳಿತ ಮೊಕ್ತಸರರು, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ) ಇದ್ದರು. ಪ್ರಾಸ್ತಾವಿಕ ಭಾಷಣವನ್ನು ಭೋಜಪ್ಪ ಗೌಡ ಪಾಲಾರುಮೂಲೆ (ಉಪಾಧ್ಯಕ್ಷರು, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ) ಮಾಡಿದರು.
ಮುಖ್ಯ ಅತಿಥಿಗಳಾಗಿ ಶುಭಾಶ್ಚಂದ್ರ ರೈ ತೋಟ (ಅಧ್ಯಕ್ಷರು, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ), ಮುರಳಿ ಪಯ್ಯಂಗಾನ (ಅಧ್ಯಕ್ಷರು, ಕುತ್ತಿಕೋಲು ಗ್ರಾಮ ಪಂಚಾಯತು), ಅರವಿಂದನ್ ವಿ.ಕೆ (6ನೇ ವಾರ್ಡ್ ಸದಸ್ಯರು ಕುತ್ತಿಕೋಲು ಗ್ರಾಮ ಪಂಚಾಯತು), ಕೆ. ರಾಧಕೃಷ್ಣನ್ ನಂಬ್ಯಾರ್ (ಜತೆ ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ), ಸತೀಶನ್ ಕುದುರೆತೊಟ್ಟಿ (ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರ ಪಾಲಾರು ಪ್ರಾದೇಶಿಕ ಸಮಿತಿ), ಹರೀಶ್ ಕಂಜಿಪಿಲಿ (ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಿನಂಗೂರು, ಮರ್ಕಂಜ, ಸುಳ್ಯ), ಶಂಕರಕೃಷ್ಣ ಭಟ್ (ಸದಸ್ಯರು, ಶ್ರೀ ಸುಬ್ರಹ್ಮಣ್ಯ ದೇವಾಲಯ ಬಂದಡ್ಕ) ಇದ್ದರು.
ಸುಂದರ ಗೌಡ (ಪಾಲಾರುಗುಂಡ್ಯದ ಕುಟುಂಬದ ಹಿರಿಯರು), ಬಾಲಕೃಷ್ಣ ಮಾಸ್ತರ್ (ಜೀರ್ಣೋದ್ಧಾರ ಸಮಿತಿ ಪ್ರಧಾನ ನಿರ್ದೇಶಕರು), ಶೇಷಪ್ಪ ಗೌಡ (ಜೀರ್ಣೋದ್ಧಾರ ಸಮಿತಿ ಪ್ರಧಾನ ರಕ್ಷಾಧಿಕಾರಿ), ಉದಯ ಕುಮಾರ್ ಪಿ.ಎಲ್ (ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರು), ಮಾಯಿಲಪ್ಪ ಗೌಡ (ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿಗಳು), ವೆಂಕಪ್ಪ ಗೌಡ (ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿಗಳು), ಬಾಬು ಗೌಡ (ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿಗಳು) ಉಪಸ್ಥಿತರಿದ್ದರು.
ಧಾರ್ಮಿಕ ಉಪನ್ಯಾಸವನ್ನು ಡಾ| ಕೆ. ಗೋವಿಂದರಾಜ್ ಕುತ್ತಿಕೋಲು (ಅಧ್ಯಾಪಕರು) ನೀಡಿದರು. “ರಾತ್ರಿ ಗಂಟೆ 7.00 ರಿಂದ 7.30ರ ತನಕ : ಕುಣಿತ ಭಜನೆ (ಶ್ರೀ ರಾಜರಾಜೇಶ್ವರಿ ಮಕ್ಕಳ ಕುಣಿತ ಭಜನಾ ತಂಡ ಪಾಲಾರು), ರಾತ್ರಿ ಗಂಟೆ 7.30 ರಿಂದ ಕುಣಿತ ಭಜನೆ, 8.00 ಗಂಟೆ ತನಕ : (ಶ್ರೀ ರಾಜರಾಜೇಶ್ವರಿ ಮಹಿಳಾ ಕುಣಿತ ಭಜನಾ ತಂಡ ಪಾಲಾರು) ರಾತ್ರಿ ಗಂಟೆ 8.00 ರಿಂದ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಾ. 31ರಂದು ಪೂರ್ವಾಹ್ನ ಗಂಟೆ 10.00 ಕ್ಕೆ ಶ್ರೀ ವೆಂಕಟ್ರರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ, ಅನ್ನದಾನ, ರಾತ್ರಿ ಗಂಟೆ 7.00 ಕ್ಕೆ : ದೈವಗಳಿಗೆ ಕೂಡುವುದು, ರಾತ್ರಿ ಗಂಟೆ 8.30 ರಿಂದ : ಕೊಲೆ, ದೇವತೆ, ಕುಕ್ಕೆತ್ತಿ-ಬಲ್ಲು ಕುಪ್ಪೆ ಪಂಜುರ್ಲಿ, ಮರ್ಲ್‌ಭೂತ, ಪಿಲಿಭೂತ ಮೊದಲಾದ ದೈವಗಳ ಕೋಲ ನಡೆಯಿತು.
ಎ.01ರಂದು ಪೂರ್ವಾಹ್ನ ಗಂಟೆ 9.00 ರಿಂದ: ಶ್ರೀ ವಿಷ್ಣುಮೂರ್ತಿ, ಧರ್ಮದೈವಗಳ ನಡಾವಳಿ ಹಾಗೂ ಗುಳಿಗನ ಕೋಲ, ಪೂರ್ವಾಹ್ನ ಗಂಟೆ 10.30 ಕ್ಕೆ ಮಾರಿಕಳ ಪ್ರವೇಶ, ಪ್ರಸಾದ ವಿತರಣೆ, ಅನ್ನದಾನ, ಮಧ್ಯಾಹ್ನ ಗಂಟೆ 2.00 ರಿಂದ ವರ್ಣರ ಪಂಜುರ್ಲಿ ದೈವದ ಕೋಲ, ರಾತ್ರಿ ಗಂಟೆ 7.00 ರಿಂದ ಕಲ್ಲುರ್ಟಿ ಮತ್ತು ಅಂಗಾರ ದೈವಗಳ ಕೋಲ (ಪಾಲಾರುಗುಂಡ್ಯ ತರವಾಡು ಮನೆಯಲ್ಲಿ) ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಸುಂದರ ಗೌಡ, ಪ್ರಧಾನ ನಿರ್ದೇಶಕರಾದ ನಿವೃತ್ತ ಮುಖ್ಯ್ಯೊ ಪಾಧ್ಯಾಯ ಬಾಲಕೃಷ್ಣ ಮಾಸ್ತರ್ ಮತ್ತು ಪಾಲರ್ ಗುಂಡ್ಯ ಕುಟುಂಬಸ್ಥರು ಹಾಗೂ ಊರ ಪರ ವೂರಿನವರು ಸೇರಿದಂತೆ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.
ಹೈಲೈಟ್ಸ್ :
- 50-60 ಮನೆಗಳಿಂದಲೇ ಸುಸಜ್ಜಿತವಾಗಿ ದೈವಸ್ಥಾನ ನಿರ್ಮಾಣದ ಬಗ್ಗೆ ಸಾನಿಧ್ಯಕ್ಕೆ ಬಂದವರು ಮೆಚ್ಚಿಗೆ ಮಾತುಗಳನ್ನಾಡಿದರು.
- ಪ್ರತಿಷ್ಠೆ ಕಾರ್ಯಕ್ರಮಗಳನ್ನು ವೀಕ್ಷಿಸಲು ದೈವಸ್ಥಾನದ ಹೊರಗೆ ಎಲ್ ಇ ಡಿ ವ್ಯವಸ್ಥೆ ಮಾಡಲಾಗಿತ್ತು.
- ದೈವಸ್ಥಾನವನ್ನು ಹೂವಿನ ಅಲಂಕಾರ ತಳಿರು ತೋರಣ, ಬಂಟಿಂಗ್ಸ್ ಗಳಿಂದ ಶೃಂಗರಿಸಲಾಗಿತ್ತು.
- ಕಾರ್ಯಕ್ರಮಗಳ ದಿನ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು.










