
ಎಣ್ಮುರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದೀ ಗರಡಿಯಲ್ಲಿ ಎ.9 -11 ರ ವರೆಗೆ ವಾರ್ಷಿಕ ನೇಮೋತ್ಸವ ನಡೆಯಲಿರುವ ಪ್ರಯುಕ್ತ ಎ 4 ರಂದು ಗೊನೆಮುಹೂರ್ತವು ನೂತನ ದರ್ಶನ ಪಾತ್ರಿಗಳ ನೇತೃತ್ವದಲ್ಲಿ, ಗರಡಿಯ ಅನುವಂಶಿಕ ಆಡಳಿತ ದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಹೋಮ ತಂಬಿಲದೊಂದಿಗೆ ನಡೆದು ಪ್ರಸಾದ ವಿತರಣೆ ನಡೆಯಿತು.
















ಈ ಸಂದರ್ಭದಲ್ಲಿ ಎನ್.ಜಿ. ಲೋಕನಾಥ ರೈ , ಶ್ರೀಮತಿ ಮಂಜುಳಾ ಆರ್ ಶೆಟ್ಟಿ ಬೆಂಗಳೂರು, ರಘುನಾಥ ರೈ ಕೆ. ಎನ್, ಪಂಜಿಮೊಗರು ರಘುನಾಥ ರೈ, ಭಾಸ್ಕರ ರೈ ಕಟ್ಟ, ನ್ಯಾಯವಾಧಿ ರಾಧಾಕೃಷ್ಣ ರೈ ಕಟ್ಟಬೀಡು, ಅನಿಲ್ ರೈ ಕಟ್ಟಬೀಡು, ಅನೂಪು ಕುಮಾರ್ ಆಳ್ವ, ನಾಗೇಶ್ ಆಳ್ವ, ಸುಧೀರ್ ಕುಮಾರ್ ಶೆಟ್ಟಿ, ಸುಜಿತ್ ರೈ ಕೆ.ಎನ್, ಜಗನ್ನಾಥ ರೈ ಕೂಲಾಯಿತೋಡಿ, ಕಾರ್ತಿಕ್ ರೈ ಕೆ. ಮೊದಲಾದವರು ಉಪಸ್ಥಿತರಿದ್ದರು.
ವರದಿ : ಎ ಎಸ್ ಎಸ್










