ಅಮೃತ್ ಮಿತ್ರ ಯೋಜನೆ : ಕುರುಂಜಿಗುಡ್ಡೆ, ಬೀರಮಂಗಲ, ನೇತಾಜಿ ಪಾರ್ಕ್ ಗಳ ನಿರ್ವಹಣೆಗೆ ದಾಖಲೆ ಪತ್ರಗಳ ಹಸ್ತಾಂತರ

ಉದ್ಯಾನವನಗಳ ನಿರ್ವಹಣೆಯ ಹೊಣೆಯನ್ನು ಸ್ವಸಹಾಯ ಸಂಘಗಳಿಗೆ ನೀಡುವ ನಿಟ್ಟಿನಲ್ಲಿ ಕೇಂದ್ರದ ಸರಕಾರದ ಅಮೃತ್ ಮಿತ್ರ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸುಳ್ಯ ನಗರದ ಮೂರು ಪಾರ್ಕ್ ಗಳನ್ನು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ಕುರುಂಜಿಗುಡ್ಡೆ, ಬೀರಮಂಗಲ, ನೇತಾಜಿ ಪಾರ್ಕ್ ಗಳನ್ನು ಸ್ಥಳೀಯ ಸ್ವಸಹಾಯ ಸಂಘಗಳಿಗೆ ನಿರ್ವಹಣೆಗೆ ನೀಡಲಾಗಿದ್ದು, ಮೂರು ಸಂಘಗಳಿಗೆ ಕಾಗದ ಪತ್ರಗಳ ಹಸ್ತಾಂತರ ಎ.7ರಂದು ನಡೆಯಿತು.















ಅಮೃತ್ ಮಿತ್ರ ನಿರ್ವಹಣೆಯಲ್ಲಿ ಒಂದು ವರ್ಷ ಅವಧಿಗೆ ಒಂದೊಂದು ಪಾರ್ಕ್ ಗೆ ರೂ.5 ಲಕ್ಷ ಅನುದಾನ ಈ ಯೋಜನೆಯಲ್ಲಿ ಬರಲಿದ್ದು, ಪಾರ್ಕ್ ನಿರ್ವಹಣೆ ಹಾಗೂ ಸ್ವಸಹಾಯ ಸಂಘಗಳಿಗೆ ಗೌರವಧನವಾಗಿ ಆ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ನಿರ್ವಹಣೆ ವಹಿಸಿಕೊಂಡಿರುವ ಸ್ವಸಹಾಯ ಸಂಘದವರು ಪಾರ್ಕ್ ನಲ್ಲಿ ಸ್ವಚ್ಚತೆ ಕಾಪಾಡಬೇಕು. ಗಿಡಗಳಿಗೆ ನೀರು ಹಾಕಬೇಕು ಇತ್ಯಾದಿ ಷರತ್ತುಗಳನ್ನು ಹಾಕಲಾಗಿದೆ.
ಹಸ್ತಾಂತರ : ಎ.7ರಂದು ಪಾರ್ಕ್ ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆಯ ಜವಾಬ್ದಾರಿ ಜನನಿ ಸ್ವಸಹಾಯ ಸಂಘದವರು ವಹಿಸಿಕೊಂಡದ್ದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಹಸ್ತಾಂತರ ಮಾಡಿದರು.
ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರುಗಳಾದ ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ ದುಗಲಡ್ಕ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಉಮ್ಮರ್ ಕೆ.ಎಸ್., ರಿಯಾಜ್ ಕಟ್ಟೆಕಾರ್, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್, ಮುಖ್ಯಾಧಿಕಾರಿ ಸುಧಾಕರ್, ಸಮುದಾಯ ಸಂಘಟಕರಾದ ಜಯಲಕ್ಷ್ಮಿ ಮೊದಲಾದವರಿದ್ದರು.










