















ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಸುಳ್ಯಇದರ ೨೦೨೪/೨೫ರ ವಾರ್ಷಿಕ ಸ್ಕೌಟ್ಸ್ -ಗೈಡ್ಸ್ ಮೇಳ, ಕಬ್, ಬುಲ್ ಬುಲ್ ಉತ್ಸವವು ಎ. ೫ ಮತ್ತು ೬ರಂದು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು. ರೋಟರಿ ಕ್ಲಬ್ ಸುಳ್ಯ ನಡೆಸಲ್ಪಡುವ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ (ರಿ.) ಆಡಳಿತಕ್ಕೆ ಒಳ ಪಟ್ಟ ಸುಳ್ಯ ದ ಪ್ರತಿಷ್ಟಿತ ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು, ಇವರನ್ನು ತರಬೇತುಗೊಳಿಸಿದ ಶಿಕ್ಷಕರಾದ ಕಬ್ ಮಾಸ್ತರ್ ಪದ್ಮನಾಭ ಕೊಯ್ನಾಡು, ಫ್ಲಾಕ್ ಲೀಡರ್ ರಶ್ಮಿ ಎಸ್. ಎನ್. ರವರು ಭಾಗವಹಿಸಿದ್ದರು.











