ಸುಳ್ಯ ಪೊಲೀಸ್ ಠಾಣೆಯ ಹೊಯ್ಸಳ ತುರ್ತು ಸ್ಪಂದನ ವಾಹನದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ದಯಾನಂದ ದೋಳ್ತಿಲರವರಿಗೆ ಎಎಸ್‌ಐ ಆಗಿ ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮೀಸಲು ಕೇಂದ್ರಕ್ಕೆ ವರ್ಗಾವಣೆಯಾಗಿದೆ.















೨೦೧೭ರಲ್ಲಿ ಸುಳ್ಯ ಠಾಣಾ ವ್ಯಾಪ್ತಿಯ ಹೆದ್ದಾರಿ ಗಸ್ತು ವಾಹನಕ್ಕೆ ಚಾಲಕರಾಗಿ ಬಂದ ಇವರು ೨೦೨೦ ರಿಂದ ತುರ್ತು ವಾಹನ ಸ್ಪಂದನ(೧೧೨) ವಾಹನದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ೨೦೦೮ ರಲ್ಲಿ ಜಿಲ್ಲಾ ಪೊಲೀಸ್ ಮೀಸಲು ಪಡೆಗೆ ಆಯ್ಕೆಯಾಗಿದ್ದರು.
ಇವರು ಎಡಮಂಗಲ ಗ್ರಾಮದ ದೋಳ್ತಿಲ ಶೀನಪ್ಪ ಗೌಡ ಮತ್ತು ದಿ. ನಾಗವೇಣಿ ದಂಪತಿಗಳ ಪುತ್ರ.










