ಸಮಗ್ರ ಅಂಕಗಳೊಂದಿಗೆ ಚಾಂಪಿಯನ್ ಆದ ಜಿ.ಎಫ್.ಜಿ.ಸಿ ಸುಳ್ಯ ತಂಡ
ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಸ್ನಾತಕೋತ್ತರ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ, ಐ,ಕ್ಯೂ,ಎ,ಸಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಕಾಮರ್ಸ್ ಆಂಡ್ ಮ್ಯಾನೆಜ್ ಮೆಂಟ್ ಫೆಸ್ಟ್ ನಲ್ಲಿ ಭಾಗವಹಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ತಂಡ ಸಮಗ್ರ ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.















ವಿವಿಧ ವಿಭಾಗಗಳಲ್ಲಿ ನಡೆದ ಸ್ಫರ್ಧೆಗಳಲ್ಲಿ ಭಾಗವಹಿಸಿದ ಕಾಲೇಜಿನ ತಂಡ ಬೀದಿನಾಟಕ ಸ್ಫರ್ಧೆಯಲ್ಲಿ ಪ್ರಥಮ, ನೃತ್ಯ ಸ್ಫರ್ಧೆಯಲ್ಲಿ ದ್ವಿತೀಯ, ರಸಪ್ರಶ್ನೆ ಸ್ಫರ್ಧೆಯಲ್ಲಿ ತಿಲಕೇಶ್ ಕೆ ಆರ್ ಮತ್ತು ಮೊಹಮ್ಮದ್ ಇರ್ಷಾದ್ ಪ್ರಥಮ, ಮಾರ್ಕೆಟಿಂಗ್ ವಿಭಾಗದ ಸ್ಫರ್ಧೆಯಲ್ಲಿ ಮನೀಷ್ ರೈ ಹಾಗೂ ಮೊಹಮ್ಮದ್ ಇರ್ಫಾನ್ ಭಾಗವಹಿಸಿ ಪ್ರಥಮ ಸ್ಥಾನಗಳನ್ನು ಪಡೆದರು.
ಅಂತಿಮವಾಗಿ ಸಮಗ್ರ ಅಂಕಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪುಷ್ಪರಾಜ್ ಕೆ ಹಾಗೂ ಉಪನ್ಯಾಸಕ ವೃಂದದವರು ಮಾರ್ಗದರ್ಶನ ಮಾಡಿದ್ದರು.










